ಮಹಿಳಾ ಠಾಣೆ ಮಿನಿ ವಿಧಾನಸೌಧಕ್ಕೆ?
ಈ ಹಿಂದೆ ಮಿನಿವಿಧಾನ ಸೌಧದ ಕಟ್ಟಡದಲ್ಲಿದ್ದ ಗ್ರಾಮೀಣ ಠಾಣೆಯ ಜಾಗದಲ್ಲಿ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ಆದರೆ ಸಂಚಾರ ನಿಯಂತ್ರಣ ಕೊಠಡಿಗೆ ನೆಟ್‌ವರ್ಕಿಂಗ್ ಕೇಬಲ್‌ಗಳು ಹಾದುಹೋಗುವ ಸೂಕ್ತ ಸ್ಥಳ ಬೇಕಿರುವುದು ಇನ್ನೂ ಹುಟುಕಾಟ ನಡೆದಿದೆ. ಜುಲೈ 31ರವರೆಗೂ ಕಾಲಾವಕಾಶ ಇರುವುದರಿಂದ ಅಷ್ಟರೊಳಗೆ ಒಂದು ಜಾಗ ಅಂತಿಮಗೊಳಿಸವುದಾಗಿ ಪೊಲೀಸರು ತಿಳಿಸಿದ್ದಾರೆ.