ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಜಗಜೀವನ್ ರಾಂ ಅನುದಾನಿತ ಬಾಲಕರ ವಸತಿ ನಿಲಯಕ್ಕೆ ಹಾಗೂ ಜನತಾ ಪ್ರೌಢಶಾಲೆಗೆ ಶಹರ ತಹಶೀಲ್ದಾರ್ ಮಹೇಶ ಗಸ್ತಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ನಿಲಯದ ಅವ್ಯವಸ್ಥೆ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಪರೀಕ್ಷಿಸಿ ವಾರ್ಡನ್ ಹಾಗೂ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ವಸತಿ ನಿಲಯದಲ್ಲಿ 29 ಮಕ್ಕಳು ಇರುವುದಾಗಿ ವಾರ್ಡನ್ ಹನುಮಂತ ಅವರ ಮಾಹಿತಿ ಆಧರಿಸಿ, ಕಡತ ಪರಿಶೀಲಿಸಿದಾಗ 21 ಮಕ್ಕಳಷ್ಟೇ ಇರುವುದು ತಹಶೀಲ್ದಾರ್ ಗಮನಕ್ಕೆ ಬಂದಿತು. ಪ್ರಶ್ನಿಸಿದಾಗ; ಸಮರ್ಪಕ ಉತ್ತರ ಹೇಳಲು ವಾರ್ಡನ್ ತಡಕಾಡಿದರು. ಅಡುಗೆ ಮನೆಯಲ್ಲಿ ಎಂಟು–ಹತ್ತು ಮಂದಿಗಷ್ಟೇ ಆಗುವಷ್ಟು ತರಕಾರಿಯನ್ನು ಹೆಚ್ಚಿಟ್ಟಿರುವುದನ್ನು ಗಮನಿಸಿದರು. ಉಗ್ರಾಣದಲ್ಲಿರುವ ಅಕ್ಕಿ, ಬೇಳೆ, ಕಾಳುಗಳ ಗುಣಮಟ್ಟ ಪರೀಕ್ಷಿಸಿ, ಪಡಿತರ ಅಕ್ಕಿಯಿಂದ ಮಕ್ಕಳಿಗೆ ಊಟ ಹಾಕುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಸ್ನಾನ ಗೃಹ ಮತ್ತು ಶೌಚಾಲಯ ಪರಿಶೀಲಿಸಿದ ಗಸ್ತಿ ಅವರು, ನಿರ್ವಹಣೆ ಇಲ್ಲದೆ ಅಶುಚಿತ್ವ ಇರುವುದನ್ನು ಕಂಡು ಕಿಡಿಕಾರಿದರು. ‘ಶೌಚಾಲಯದ ಬಾಗಿಲು ಮುರಿದಿದೆ, ಅದರೊಳಗಡೆ ಎಲ್ಲವೂ ಹೊಲಸೆದ್ದು ನಾರುತ್ತಿದೆ. ಟ್ಯಾಂಕ್ಲ್ಲಿ ಸಂಗ್ರಹಿಸಿದ್ದ ನೀರು ಹೊಲಸಾಗಿದೆ. ಮಕ್ಕಳಿಗೆ ಕನಿಷ್ಠ ಸೌಲಭ್ಯವೂ ನೀಡಲಾಗುತ್ತಿಲ್ಲ ಎಂದರೆ ಹಾಸ್ಟೆಲ್ ಯಾಕೆ ನಡೆಸಬೇಕು’ ಎಂದು ಶಿಕ್ಷಕರನ್ನು ಪ್ರಶ್ನಿಸಿದರು.

ವಾರ್ಡನ್ ವಾಸಿಸುವ ಕೊಠಡಿ ಹಾಗೂ ಮಕ್ಕಳು ವಾಸಿಸುವ ಕೊಠಡಿಯನ್ನು ಪರಿಶೀಲಿಸಿ, ‘ನೀವು ಮಲಗುವಾಗ ಸೊಳ್ಳೆ ಪರದೆ, ಗಾದಿ ಬಳಸುತ್ತೀರಿ. ಚಳಿಯಲ್ಲಿ ಮಕ್ಕಳು ಚಿಕ್ಕ ಚಾಪೆ ಮೇಲೆ ಮಲಗಬೇಕು. ಕೊಠಡಿಯ ಕಿಟಕಿ ಗಾಜುಗಳು ಒಡೆದಿದ್ದು ದುರಸ್ತಿಯೇ ಮಾಡಿಲ್ಲ. ಸರ್ಕಾರ ಎರಡು ಎಕರೆ ಜಾಗ ನೀಡಿ ಇಷ್ಟು ದೊಡ್ಡ ಹಾಸ್ಟೆಲ್ ನಿರ್ಮಿಸಿಕೊಟ್ಟು ಅನುದಾನ ನೀಡಿದರೂ, ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎಂದರು.

‘ನಿಲಯದ ಆವರಣದಲ್ಲಿ ಬಿದ್ದಿರುವ ಕಸ, ಬೆಳೆದಿರುವ ಹುಲ್ಲನ್ನು ನೋಡಿ, ಎರಡು ದಿನದಲ್ಲಿ ಎಲ್ಲವೂ ಶುಚಿಯಾಗಬೇಕು. ಗುರುವಾರ ಮತ್ತೊಮ್ಮೆ ಭೇಟಿ ಮಾಡಿ ಪರಿಶೀಲಿಸುತ್ತೇನೆ‘ ಎಂದರು. ಹಾಸ್ಟೆಲ್ ಸ್ಥಿತಿಗತಿ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಕಂದಾಯ ನಿರೀಕ್ಷಕ ರವಿ ಬೆನ್ನೂರ, ಗ್ರಾಮ ಲೆಕ್ಕಾಧಿಕಾರಿ ಬ್ರಿಜೇಶ ಇದ್ದರು. ‘ಪ್ರಜಾವಾಣಿ’ಯಲ್ಲಿ ಇದೇ ನ. 16ರ ಸಂಚಿಕೆಯಲ್ಲಿ ‘ಹಾಸ್ಟೆಲ್ ಅಧೋಗತಿ, ಸೌಲಭ್ಯ ಕೊರತೆ’ ಶೀರ್ಷಿಕೆಯಡಿ ಹಾಸ್ಟೆಲ್ ಅವ್ಯವಸ್ಥೆಯ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹುಬ್ಬಳ್ಳಿ ಶಹರ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು.

ವಸತಿ ನಿಲಯದ ಅನುದಾನದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತು ಕ್ರಮದ ಕುರಿತಾಗಿ ಜಿಲ್ಲಾಡಳಿತಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು
–ಮಹೇಶ ಗಸ್ತಿ ತಹಶೀಲ್ದಾರ್ ಹುಬ್ಬಳ್ಳಿ ಶಹರ

ಡಿಸಿಗೆ ವರದಿ ಸಲ್ಲಿಸುವ ಎಚ್ಚರಿಕೆ

‘ಪ್ರಜಾವಾಣಿ’ ಪತ್ರಿಕೆಯ ವರದಿ ಆಧರಿಸಿ ವಸತಿ ನಿಲಯಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವಸತಿ ನಿಲಯದಲ್ಲಿ ಮೂಲಸೌಲಭ್ಯದ ಕೊರತೆ ಕಾಣುತ್ತಿದ್ದು ನಿರ್ವಹಣೆ ಇಲ್ಲವಾಗಿದೆ. ಎರಡು ದಿನದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಹಾಗೂ ಮಕ್ಕಳಿಗೆ ಮಲಗಲು ಬಂಕರ್ ಅಳವಡಿಸಲು ಸೂಚಿಸಿದ್ದೇನೆ. ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಗೆ ತಕ್ಷಣ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಹಶೀಲ್ದಾರ್ ಮಹೇಶ ಗಸ್ತಿ ತಿಳಿಸಿದರು.

ವರದಿ ಸಲ್ಲಿಸಲು ಬಿಇಒಗೆ ಸೂಚನೆ

ವಸತಿ ನಿಲಯದ ಪಕ್ಕದಲ್ಲಿರುವ ಅನುದಾನಿತ ಜನತಾ ಪ್ರೌಢಶಾಲೆಗೆ ಭೇಟಿ ನೀಡಿ 8 9 10ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ಪರೀಕ್ಷಿಸಿದರು. ಮಕ್ಕಳಿಗೆ ಕನ್ನಡ ಓದಲು ಗಣಿತದ ಸೂತ್ರ ಬಿಡಿಸಲು ಬರದಿರುವುದನ್ನು ಗಮನಿಸಿ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು. ಶಹರ ಬಿಇಒ ಅವರಿಗೆ ಕರೆ ಮಾಡಿ ಎರಡು ದಿನದೊಳಗೆ ಶಾಲೆಗೆ ಭೇಟಿಕೊಟ್ಟು ವರದಿ ಸಲ್ಲಿಸುವಂತೆ ಸೂಚಿಸಿದರು. ‘ಕಲಿಕಾ ಗುಣಮಟ್ಟವಿಲ್ಲದ ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ. ಪ್ರಸ್ತುತ ವರ್ಷ 10ನೇ ತರಗತಿಯ ಎಲ್ಲ ಮಕ್ಕಳು ಉತ್ತೀರ್ಣವಾಗುವಂತೆ ಅವರನ್ನು ಸಿದ್ಧಗೊಳಿಸಬೇಕು’ ಎಂದು ಶಿಕ್ಷಕರಿಗೆ ತಹಶೀಲ್ದಾರ್ ಮಹೇಶ ಗಸ್ತಿ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.