ಹುಬ್ಬಳ್ಳಿ: ಅವಳಿ ನಗರದಲ್ಲಿ ಮಹಾನಗರ ಪಾಲಿಕೆಯು ನೀರು ರಹಿತ ಮೂತ್ರಾಲಯಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ಐದು ಪ್ರಾಯೋಗಿಕವಾಗಿ ಬಳಕೆಗೆ ಲಭ್ಯ ಇವೆ.

ಹುಬ್ಬಳ್ಳಿಯಲ್ಲಿ ಈ ಹಿಂದೆ ಇ–ಟಾಯ್ಲೆಟ್ ಪರಿಚಯಿಸಲಾಗಿತ್ತು. ಆದರೆ, ಅದು ಬಳಕೆಯಾಗಿದ್ದು ಕಡಿಮೆ. ಇದಕ್ಕೆ ಕಾರಣ ನಿರ್ವಹಣೆ ಕೊರತೆ ಮತ್ತು ನೀರಿನ ಸಮಸ್ಯೆ. ಈಗಲೂ ನಗರದ ಬಹುತೇಕ ಸಾರ್ವಜನಿಕ ಮೂತ್ರಾಲಯಗಳಿಗೆ ಹೋದರೆ ಅಲ್ಲಿ ದುರ್ವಾಸನೆ ವ್ಯಾಪಿಸುತ್ತದೆ. ಅದಕ್ಕೆ ನೀರು ರಹಿತ ಮೂತ್ರಾಲಯ ಅನುಕೂಲವಾಗಲಿದೆ.

ಮೊದಲ ಹಂತದಲ್ಲಿ ಹುಬ್ಬಳ್ಳಿಯ ಪಾಲಿಕೆ ಕಚೇರಿ, ಸ್ಮಾರ್ಟ್ ಸಿಟಿ ಕಚೇರಿ, ಚಿಟಗುಪ್ಪಿ ಆಸ್ಪತ್ರೆ, ಇಂದಿರಾ ಗಾಜಿನ ಮನೆ ಉದ್ಯಾನದ ಆವರಣ ಮತ್ತು ಧಾರವಾಡದ ಪಾಲಿಕೆ ಕಚೇರಿ ಆವರಣದಲ್ಲಿ ಒಟ್ಟು ಐದು ಮೂತ್ರಾಲಯಗಳನ್ನು ನಿರ್ಮಿಸಲಾಗಿದೆ.

15 ಕಡೆ ಈಗಿರುವ ಮೂತ್ರಾಲಯಗಳನ್ನೇ ನೀರು ರಹಿತ ಮೂತ್ರಾಲಯವಾಗಿ ಪರಿವರ್ತಿಸಲಾಗಿದ್ದು, ಸಾರ್ವಜನಿಕ ಬಳಕೆಗೆ ನೀಡಿಲ್ಲ. ಅಲ್ಲದೆ, ಸಾರ್ವಜನಿಕವಾಗಿ ಒಟ್ಟು 46 ಕಡೆ ನೀರು ರಹಿತ ಮೂತ್ರಾಲಯ ನಿರ್ಮಿಸಲಾಗುವುದು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಬ್ಯಾಂಕ್ ಆಫ್ ಬರೋಡಾದ ಸಿಎಸ್ಆರ್ ಅನುದಾನದಲ್ಲಿ ಈ ಯೋಜನೆ ರೂಪಿಸಿದ್ದು, ಬೆಂಗಳೂರಿನ ನೇಚರ್ ಕೇರ್ ಸಲ್ಯೂಷನ್ ಕಂಪನಿ ಇದನ್ನು ಅನುಷ್ಠಾನಗೊಳಿಸುತ್ತಿದೆ.

ಒಂದೊಂದು ಮೂತ್ರಾಲಯಕ್ಕೆ ₹6,900 ಮೌಲ್ಯದ ರೆಟ್ರೊಪಿಟ್ ಸೇರಿದಂತೆ ಇತರ ವಸ್ತುಗಳನ್ನು ಅಳವಡಿಸಿ ನಿರ್ಮಿಸಲಾಗುತ್ತಿದೆ.

ಎಲ್ಲೆಲ್ಲಿ ನೀರು ರಹಿತ ಮೂತ್ರಾಲಯ

ಇಂದಿರಾ ಗಾಜಿನ ಮನೆ, ಮಹಾನಗರ ಪಾಲಿಕೆಯ ವಲಯ ಕಚೇರಿ 5, ಮಹಾನಗರ ಪಾಲಿಕೆಯ ಧಾರವಾಡ ಮುಖ್ಯ ಕಚೇರಿಯಲ್ಲಿ ಒಂದು, ಚಿಟಗುಪ್ಪಿ ಆಸ್ಪತ್ರೆಯಲ್ಲಿ 2, ಸ್ಮಾರ್ಟ್ ಸಿಟಿ ನಗರ ಕಚೇರಿಯಲ್ಲಿ 1 ಮೂತ್ರಾಲಯ ಮಾಡಲಾಗಿದ್ದು, ಒಟ್ಟು 20 ಯುನಿಟ್ ಇವೆ. ಹಳೆಯ ಮೂತ್ರಾಲಯಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಜೊತೆಗೆ 15 ಇ–ಟಾಯ್ಲೆಟ್ ಮಾಡಲಾಗುತ್ತಿದೆ.

‘ಅವಳಿ ನಗರದಲ್ಲಿ ಸಾರ್ವಜನಿಕ ಮೂತ್ರಾಲಯಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ನೀರು ರಹಿತ ಮೂತ್ರಾಲಯ ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ಐದು ಕಡೆ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ 46 ಹಾಗೂ ಈಗಿರುವ 15 ಇ–ಟಾಯ್ಲೆಟ್ಗಳನ್ನು ನೀರು ರಹಿತ ಮೂತ್ರಾಲಯಗಳನ್ನಾಗಿ ಮಾಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ತಿಳಿಸಿದರು.

ನೀರು ರಹಿತ ಮೂತ್ರಾಲಯಗಳ ನಿರ್ಮಾಣದಿಂದ ನೀರು ವ್ಯರ್ಥವಾಗುವುದನ್ನು ತಡೆಯಬಹುದು. ಇವುಗಳನ್ನು ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ
ರುದ್ರೇಶ್ ಘಾಳಿ ಪಾಲಿಕೆ ಆಯುಕ್ತ

ಏನು ಉಪಯೋಗ

ನೀರು ರಹಿತ ಮೂತ್ರಾಲಯಕ್ಕೆ ನೀರು ಪೂರೈಕೆಯ ಪೈಪ್ಲೈನ್ನ ಸಂಪರ್ಕ ಹಾಗೂ ಪ್ಲಶ್ ಮಾಡುವ ಅವಶ್ಯಕತೆ ಇರುವುದಿಲ್ಲ. ಈಗಿರುವ ಯೂರಿನಲ್ಸ್ ಪಿಟ್ಗಳನ್ನು ನೀರಿನ ಅವಶ್ಯಕತೆ ಇಲ್ಲದ ಮೂತ್ರಾಲಯಗಳನ್ನಾಗಿ ಪರಿವರ್ತಿಸಲು ಹೆಚ್ಚು ಕಸರತ್ತು ಮಾಡುವ ಅಗತ್ಯವೂ ಇಲ್ಲ. ಪಿಟ್ಗೆ ಸಂಪರ್ಕ ಕಲ್ಪಿಸಲಾಗಿರುವ ಓಲೇರ್ ಟ್ಯಾಪ್ನಲ್ಲಿ ಸೀಲಾಂಟ್ ಲಿಕ್ವಿಡ್ (ದ್ರವ ರೂಪದ ರಾಸಾಯನಿಕ) ಸೇರಿಸಲಾಗಿದ್ದು ಈ ದ್ರವ ಗಬ್ಬುವಾಸನೆ ಹರಡುವ ಅನಿಲವನ್ನು ತಡೆಗಟ್ಟುತ್ತದೆ. ಬಳಕೆ ಮಾಡುವ ಜನಸಾಂದ್ರತೆಗೆ ಅನುಗುಣವಾಗಿ ಸೀಲಾಂಡ್ ಲಿಕ್ವಿಡ್ ಅನ್ನು 3ರಿಂದ 6 ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಈ ಸಂಬಂಧ ನೇಚರ್ ಕೇರ್ ಸಲ್ಯೂಷನ್ಸ್ ಎಂಬ ಸರ್ಕಾರೇತರ ಸಂಸ್ಥೆ ಪಾಲಿಕೆಯನ್ನು ಸಂಪರ್ಕಿಸಿದೆ. ಸಕಾರಾತ್ಮಕವಾಗಿದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಪಾಲಿಕೆ ಉದ್ದೇಶಿಸಿದೆ. ಇದಕ್ಕಾಗಿ ಯಾವುದಾದರೂ ಕಂಪನಿ ಅಥವಾ ಸಂಸ್ಥೆಯಿಂದ ಸಿಎಸ್ಆರ್ ಅನುದಾನ ಪಡೆಯಲು ಚಿಂತಿಸಿದೆ. ಈಗಿರುವ ಮೂತ್ರಾಲಯಗಳನ್ನು ನಿತ್ಯ 400 ಬಾರಿ (ಸಾರ್ವಜನಿಕ ಸ್ಥಳ ಹಾಗೂ ಕಚೇರಿಗಳಲ್ಲಿ) ಬಳಸಿದರೆ ತಿಂಗಳಿಗೆ 15ರಿಂದ 18 ಸಾವಿರ ಲೀಟರ್ ನೀರು ಅಪವ್ಯಯವಾಗುತ್ತದೆ ಎಂದು ನೇಚರ್ ಕೇರ್ ಸಲ್ಯೂಷನ್ಸ್ ಸಂಸ್ಥೆ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.