ಕುಂದಗೋಳ: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷ ಆರಂಭಿಸಿದ್ದು ಪಂಚಮಸಾಲಿ ಸಮುದಾಯವು ಸಮೀಕ್ಷೆಯಲ್ಲಿರುವ ಜಾತಿ ಕಾಲಂ ಸಂಖ್ಯೆ 9 ರಲ್ಲಿ ಕೋಡ್ ಸಂಖ್ಯೆ ಎ-0868 ರಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು ಎಂದು ತಾಲ್ಲೂಕು ಸಮಿತಿ ಒಮ್ಮತದಿಂದ ತೀರ್ಮಾನಿಸಿದ್ದು ಸಮಾಜ ಬಾಂದವರು ಜಾತಿ ಕಾಲಂನಲ್ಲಿ ಇದನ್ನು ನಮೂದಿಸಬೇಕೆಂದು ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕ ಅಧ್ಯಕ್ಷ ನಾಗರಾಜ ದೇಶಪಾಂಡೆ ಹೇಳಿದರು.

ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಸಭಾ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದವರು ಯಾವುದೇ ಗೊಂದಲಕ್ಕೆ ಕಿವಿಗೊಡದೆ ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿಕೊಳ್ಳಬೇಕು ಎಂದು ಈ ಕುರಿತು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚಿಸಿದ್ದಾರೆ. ನಮ್ಮ ಸಮಾಜದ ಎಳ್ಗೆಗೆ ಶ್ರಮಿಸಿದ ಶ್ರೀಗಳೆ ನಮಗೆ ಮಾರ್ಗ ಎಂದರು.

ವಿಜಯಾನಂದ ಕಾಶಪ್ಪನವರು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮಿಜಿಯವರನ್ನು ಪೀಠದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಮಾಜ ಒಪ್ಪುವುದಿಲ್ಲ. ಸಮಾಜದ ಏಳ್ಗೆಗಾಗಿ ಸ್ವಾಮೀಜಿ ಶ್ರಮಿಸುತ್ತಿದ್ದು, ಶ್ರೀಗಳ ಜೋತೆ ಭಕ್ತ ಸಮೂಹವಿದ್ದು ಕಾಶಪ್ಪನವರು ಒಬ್ಬರೇ ತೀರ್ಮಾನ ಮಾಡುವಂತಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸೋಮರಾವ ದೇಸಾಯಿ, ಜಗನಾಥಗೌಡ ಸಿದ್ದನಗೌಡ್ರ, ರಾಜುಗೌಡ್ರ ಪಾಟೀಲ, ಗೌಡಪ್ಪಗೌಡ ಪಾಟೀಲ, ವಾಯ.ಬಿ ಬಿಳೇಬಾಳ, ಆರ್ ಎಮ್ ಕಮತರ, ಬಸವರಾಜ ನಾವಳ್ಳಿ, ಡಾ.ಪ್ರಭುಗೌಡ ಶಂಕ್ಯಾಗೌಶಾನಿ ಮಾತನಾಡಿದರು.

ಅಪ್ಪಣ್ಣ ಹುಂಡೇಕರ, ಜಿ.ಎಸ್.ಯಲಿವಾಳ, ಸೋಮನಗೌಡ ಪಾಟೀಲ, ಚನ್ನಪ್ಪ ಮಲ್ಲಾಪೂರ, ಶಂಕ್ರಪ್ಪ ಸಂಕಣ್ಣವರ, ವೈ.ಎನ್ ಪಾಟೀಲ, ವೆಂಕನಗೌಡ ಕಂಠೇಪ್ಪಗೌಡ್ರ, ಬಸವರಾಜ ಶಿರಸಂಗಿ, ಯಲ್ಲಪ್ಪ ಶಿಗ್ಗಾಂವಿ, ಯಲ್ಲಪ್ಪ ಸವಣೂರ, ಮಂಜು ಕಾಲವಾಡ,ಸಿದ್ದಣ್ಣ ಇಂಗಳಳ್ಳಿ, ಶೇಖಣ್ಣ ಬಾಳಿಕಾಯಿ, ವೆಂಕನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.