ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಗರದಲ್ಲಿ ಶುಕ್ರವಾರ ನಡೆದ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ದಲ್ಲಿ ಹಲವು ಮಠಾಧೀಶರು ಹಾಗೂ ಗಣ್ಯರು ‘ಒಗ್ಗಟ್ಟಿನ’ ಮಂತ್ರ ಪಠಿಸಿದರು. ಸಮಾಜದವರೆಲ್ಲ ತಮ್ಮಲ್ಲಿರುವ ವೈಮನಸ್ಸು ಮರೆತು, ಒಗ್ಗೂಡಿ ಸಾಗಬೇಕು ಎಂಬ ಸಂದೇಶ ಸಾರಿದರು.

ಮೂರುಸಾವಿರ ಮಠದಿಂದ ಆರಂಭವಾದ ಏಕತಾ ಮೆರವಣಿಗೆಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಸಾಗಿಬಂದರು. ನೆಹರೂ ಮೈದಾನದಲ್ಲಿ ನಿರ್ಮಿಸಿದ್ದ ‘ಹಾನಗಲ್ಲ ಶ್ರೀ ಕುಮಾರೇಶ್ವರ ಮಹಾಮಂಟಪ’ದ ಬಳಿ ಅವರಿಗೆ ಪುಷ್ಪವೃಷ್ಟಿ ಸುರಿಸಲಾಯಿತು. ನಂದಿಕೋಲು ಕುಣಿತ, ಕಹಳೆ, ಜಯಘೋಷ ಮೆರುಗು ನೀಡಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಮಾವೇಶದಲ್ಲಿ ಪಾಲ್ಗೊಂಡ ಕೆಲ ಸ್ವಾಮೀಜಿಗಳು ಹಾಗೂ ಮುಖಂಡರು, ‘ಮುಂಬರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂಬುದಾಗಿಯೇ ನಮೂದಿಸಿ’ ಎಂದು ಕರೆ ನೀಡಿದರು. ಇನ್ನು ಕೆಲವರು ಜಾತಿ ಕಾಲಂನಲ್ಲಷ್ಟೇ ‘ವೀರಶೈವ ಲಿಂಗಾಯತ’ ಎಂದು ಬರೆಯಿಸಿ ಎಂದು ಸಲಹೆಯಿತ್ತರು. ಅಂತಿಮ ನಿರ್ಣಯದಲ್ಲಿ ಧರ್ಮದ ಹೆಸರು ನಮೂದಿಸುವುದನ್ನು ಸಮಾಜದವರ ವಿವೇಚನೆಗೆ ಬಿಡಲಾಯಿತು.

‘ಲಿಂಗಧಾರಣೆ ಮಾಡಿದವರು ವೀರಶೈವರು ಎಂದು ಆಗಮದಲ್ಲೇ ತಿಳಿಸಲಾಗಿದೆ. ಹೀಗಾಗಿ, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಸಮೀಕ್ಷೆ ವೇಳೆ ವೀರಶೈವರು ಹಿಂದೂ ಧರ್ಮ ಎಂದು ಬರೆಸಬಾರದು. ಹೀಗೆ ತಪ್ಪು ಮಾಹಿತಿ ನೀಡಿದ್ದರಿಂದಲೇ ಈ ಹಿಂದಿನ ಸಮೀಕ್ಷೆಯಲ್ಲಿ ಸಮಾಜದ ಸಂಖ್ಯೆ ಕುಸಿದಿದೆ’ ಎಂದು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

‘ನಮ್ಮದೇ ತಪ್ಪಿನಿಂದ ಸಮಾಜ ಪಾತಾಳಕ್ಕೆ ಕುಸಿದಿದೆ. ಇದು ಸಮಾಜದ ಪುನರುತ್ಥಾನ ದ ಸಮಾವೇಶವಾಗಿದೆ’ ಎಂದು ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಅಭಿಪ್ರಾಯಪಟ್ಟರು. ‘ಸಮಾಜದ ತಳ ಪಂಗಡಗಳು ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ಕಾಂತರಾಜ ಆಯೋಗದ ವರದಿ ತಿಳಿಸಿದೆ. ಕೆಲವರ ಹುನ್ನಾರದಿಂದ ಸಮಾಜದವರಿಗೆ ಅನ್ಯಾಯವಾಗಿದೆ. ಕೇಂದ್ರದಲ್ಲಿ ಸಮಾಜಕ್ಕೆ ಹಿಂದುಳಿದ ವರ್ಗದ ಸ್ಥಾನಮಾನ ನೀಡಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಮಾಜ ಒಗ್ಗಟ್ಟಾದರೆ ಯಾವುದೂ ಅಸಾಧ್ಯವಲ್ಲ. ರೇಣುಕಾಚಾರ್ಯರು ಮತ್ತು ಬಸವಾದಿ ಶಿವಶರಣರ ಸಂದೇಶ ಒಂದೇ ಆಗಿದೆ. ಇದನ್ನರಿತು, ಮುನ್ನಡೆದರೆ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ’ ಎಂದರು.

ಸಮಾವೇಶಕ್ಕೂ ಮುನ್ನ, ನಗರದ ಬಿವಿಬಿ ಕಾಲೇಜಿನಲ್ಲಿ ಸಚಿವ ಈಶ್ವರ ಖಂಡ್ರೆ, ಸಂಸದ ಜಗದೀಶ ಶೆಟ್ಟರ್, ಪ್ರಭಾಕರ ಕೋರೆ ಸೇರಿ ಸಮಾಜದ ಹಲವು ಮುಖಂಡರು ಸಭೆ ನಡೆಸಿ, ಸಮಾವೇಶದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಕುರಿತು ಚರ್ಚಿಸಿದರು.

ಬಸವಣ್ಣನವರ ಸಂದೇಶವನ್ನು ಪಂಚಪೀಠಗಳು ಸಾರುತ್ತವೆ. ಇತರೆ ಮಠಾಧೀಶರು ರೇಣುಕಾಚಾರ್ಯರ ಬಗ್ಗೆ ಮಾತನಾಡದೆ ದ್ವೇಷ ಸಾಧಿಸುತ್ತಿದ್ದಾರೆ.
ಪ್ರಸನ್ನರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ರಂಭಾಪುರಿ ಮಠ

ಮಹಾರಾಷ್ಟ್ರದಲ್ಲಿ ವೀರಶೈವ ಮತ್ತು ಲಿಂಗಾಯತ ಬೇಧವಿಲ್ಲ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿದರೆ ಸಮಾಜದ ಜನಸಂಖ್ಯೆ ಹಲವು ಕೋಟಿಯಷ್ಟಾಗುತ್ತದೆ
ಮನೋಹರ ಧೋಂಡೆ ಸಂಸ್ಥಾಪಕ ಅಧ್ಯಕ್ಷ ಮಹಾರಾಷ್ಟ್ರದ ಶಿವ ಸಂಘಟನೆ

ಶಕ್ತಿ ಅಲ್ಲ ಭಕ್ತಿ ಪ್ರದರ್ಶನ

‘ಲಿಂಗಾಯತ ವೀರಶೈವ ಸಮಾಜದವರಲ್ಲಿ ಕಾಯಕ–ದಾಸೋಹ ತತ್ವ ಪಾಲನೆ ಕುಸಿಯುತ್ತಿದೆ. ಸಮಾಜದವರಿಗೆ ಧರ್ಮಾಚರಣೆ ಮುಖ್ಯವಾಗಿದೆ. ಈ ಸಮಾವೇಶ ಶಕ್ತಿ ಪ್ರದರ್ಶನವಲ್ಲ ಭಕ್ತಿ ಪ್ರದರ್ಶನವಾಗಿದೆ. ಸಮಾಜದ ಅಭಿವೃದ್ಧಿ ಏಕತೆಯ ಕನಸು ಕಂಡಿದ್ದ ಹಾನಗಲ್ಲ ಕುಮಾರ ಶಿವಯೋಗಿಗಳ ಕನಸು ಈ ಮೂಲಕ ನನಸಾಗಿದೆ’ ಎಂದು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸಭಾ ನಿಯಮ ಉಲ್ಲಂಘನೆ: ಬೊಮ್ಮಾಯಿ ಗರಂ

ಮಹಾರಾಷ್ಟ್ರದ ಶಿವ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮನೋಹರ ಧೋಂಡೆ ಅವರು ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಂಘಟನೆ ಕುರಿತು ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಿಸಿದರು. ಅದಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು ‘ವೇದಿಕೆಯಲ್ಲಿ ಯಾವುದೇ ಪಕ್ಷದ ನಾಯಕರ ಕುರಿತು ಮಾತನಾಡಬಾರದೆಂದು ತಿಳಿಸಿದರೂ ಸಭೆಯ ನಿಯಮ ಉಲ್ಲಂಘಿಸಿದ್ದು ಸರಿಯಲ್ಲ’ ಎಂದು ಆಕ್ಷೇಪಿಸಿದರು. ಇದಕ್ಕೆ ಸಂಸದ ಜಗದೀಶ ಶೆಟ್ಟರ್ ದನಿಗೂಡಿಸಿದರು. ಇದರಿಂದ ಕೆಲ ಸಮಯ ಗೊಂದಲ ಉಂಟಾಯಿತು. ಇದಕ್ಕೂ ಮೊದಲು ವೇದಿಕೆಯಲ್ಲಿ ಧೋಂಡೆ ಅವರಿಗೆ ಮೀಸಲಾಗಿದ್ದ ಆಸನವನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ಗಲಾಟೆ ಮಾಡಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು.

ವಿವಿಧ ಜಿಲ್ಲೆಗಳಿಂದ ಜನರು ಭಾಗಿ

ಧಾರವಾಡ ದಾವಣಗೆರೆ ಶಿವಮೊಗ್ಗ ವಿಜಯಪುರ ಬಾಗಲಕೋಟೆ ಗದಗ ಕಲಬುರಗಿ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮೈದಾನದ ಬಳಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶ ಮುಕ್ತಾಯದವರೆಗೂ ಸ್ವಯಂ ಸೇವಕರು ಊಟ ವಿತರಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಸಮಾವೇಶದಲ್ಲಿ ಮುಖ್ಯ ವೇದಿಕೆ ಸೇರಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಮುಖ್ಯ ವೇದಿಕೆಯಲ್ಲಿ ಪ್ರಮುಖ ಮಠಾಧೀಶರಿಗೆ ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಉಳಿದ ವೇದಿಕೆಗಳಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಪ್ರಮುಖರ ಆಸೀನರಾಗಿದ್ದರು. ಸಮಾವೇಶ ಆರಂಭವಾಗುತ್ತಿದ್ದಂತೆ ಮೈದಾನಕ್ಕೆ ಸೇರುವ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.