ಹುಬ್ಬಳ್ಳಿ: ದಸರಾ ಹಬ್ಬದ ನಿಮಿತ್ತ ಅ.11ರಂದು ನಡೆಯುವ ಆಯುಧ ಪೂಜೆಯ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕುಂಬಳಕಾಯಿ, ಬೂದ ಕುಂಬಳಕಾಯಿ, ಬಾಳೆ ಕಂದು, ನಿಂಬೆಹಣ್ಣು ಹಾಗೂ ಹೂವಿನ ಮಾರಾಟ ಜೋರಾಗಿದೆ.

ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ದುರ್ಗದ ಬೈಲು ಮಾರುಕಟ್ಟೆ, ಜನತಾ ಬಜಾರ್, ಕೇಶ್ವಾಪುರ, ಹಳೇ ಹುಬ್ಬಳ್ಳಿ ಹಾಗೂ ಗೋಕುಲ ರಸ್ತೆಯ ಬದಿ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಈಗಾಗಲೇ ರೈತರು ಕುಂಬಳಕಾಯಿಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಆಯುಧ ಪೂಜೆಗಾಗಿ ಎಲ್ಲರೂ ಸಹಜವಾಗಿ ಮನೆ, ಅಂಗಡಿ, ಗ್ಯಾರೇಜ್, ವ್ಯಾಪಾರ ಮಳಿಗೆ, ಬಟ್ಟೆ ಅಂಗಡಿ, ಹೋಟೆಲ್ ಶುಚಿ ಮಾಡುತ್ತಾರೆ. ಇದರೊಂದಿಗೆ ತಮ್ಮ ವೃತ್ತಿಗೆ ಸಂಬಂಧಿಸಿದ ಪರಿಕರ ಹಾಗೂ ನಿತ್ಯ ಬಳಸುವ ವಾಹನಗಳನ್ನು ಸ್ವಚ್ಛ ಮಾಡಿ, ಅವುಗಳನ್ನು ಒಂದೆಡೆ ಇಟ್ಟು ಆಯುಧ ಪೂಜೆ ಮಾಡುತ್ತಾರೆ. ಈ ವೇಳೆ ಕುಂಬಳಕಾಯಿ ಒಡೆಯುವುದು ಸಂಪ್ರದಾಯ. ಹೀಗಾಗಿ ರೈತರು, ಮಾರಾಟಗಾರರು ಒಂದು ದಿನ ಮುಂಚೆಯೇ ಕುಂಬಳಕಾಯಿ, ಬೂದ ಕುಂಬಳಕಾಯಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

‘ಕಂಬಳಕಾಯಿ, ಬೂದಕುಂಬಳಕಾಯಿ ಗಾತ್ರದ ಆಧಾರದ ಮೇಲೆ ₹100ರಿಂದ ₹180ರ ತನಕ ಮಾರಾಟ ಮಾಡಲಾಗುತ್ತಿದೆ. ಆಯುಧ ಪೂಜೆಯ ದಿನ ದರದಲ್ಲಿ ತುಸು ಹೆಚ್ಚಳವಿರುತ್ತದೆ. ಹೀಗಾಗಿ ಜನರು ಆಯುಧ ಪೂಜೆ ಮುಂಚೆಯೇ ಕುಂಬಳಕಾಯಿ ಖರೀದಿಸುತ್ತಿದ್ದಾರೆ’ ಎಂದು ನಗರದ ಚನ್ನಮ್ಮ ವೃತ್ತದಲ್ಲಿ ಕುಂಬಳಕಾಯಿ ಮಾರಾಟ ಮಾಡುತ್ತಿದ್ದ ಕಲಘಟಗಿಯ ರೈತ ನಾಗರಾಜಪ್ಪ ಹೂಗಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.