ಧಾರವಾಡ: ‘ಬೆಂಗಳೂರಿನ ಮಾದನಾಯಕನಹಳ್ಳಿಯ ಕೈಲೇಶ್ವರ ಮಠದ ಪೂರ್ಣಾನಂದಪುರಿ ಸ್ವಾಮೀಜಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ಸಚಿವ ತಂಗಡಗಿ ಅವರ ತೇಜೋವಧೆ ಮಾಡುವ ಕುತಂತ್ರ ಇದು’ ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಸಮಾಜ ಸಂಘದ ಮುಖಂಡ ರವಿ ಕೆ. ಪೂಜಾರ ದೂರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ರೀತಿ ಹೇಳಿಕೆ ನೀಡುವುದು ಸ್ವಾಮೀಜಿಗೆ ಶೋಭೆ ತರುವುದಿಲ್ಲ. ಸಾಮೀಜಿ ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದರು.

‘ಸ್ವಾಮೀಜಿ ಹೇಳಿಕೆ ರಾಜಕೀಯ ವ್ಯಕ್ತಿಯ ಹೇಳಿಕೆಯಂತಿದೆ. ಈ ಆರೋಪಕ್ಕೆ ಆಧಾರ ಇದ್ದರೆ ತೋರಿಸಲಿ. ಪೂರ್ಣಾನಂದಪುರಿ ಸ್ವಾಮೀಜಿ (ಬಿ.ಜೆ. ಪುಟ್ಟಸ್ವಾಮಿ) ಪೂರ್ವಾಶ್ರಮದಲ್ಲಿ ರಾಜಕೀಯದಲ್ಲಿದ್ದರು, ಸಚಿವರೂ ಆಗಿದ್ದರು. ಇಂಥ ಹೇಳಿಕೆ ಮರುಕಳಿಸಿದರೆ ಸ್ವಾಮೀಜಿ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಹು–ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಭೋವಿ, ತುಳಸಪ್ಪ ಪೂಜಾರ, ಶ್ರೀನಾಥ ಉಣಕಲ್, ಮಾರುತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.