ಬುಧವಾರ, ಡಿಸೆಂಬರ್ 8, 2021
28 °C

ಹುಬ್ಬಳ್ಳಿಯಲ್ಲಿ ರಕ್ಷಾಬಂಧನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಿತ್ಯ ಕೊರೊನಾ ಸೋಂಕಿನ ಸುದ್ದಿಗಳಿಂದ ಬೇಸತ್ತಿದ್ದ ನಗರದ ಜನ ಸೋಮವಾರ ರಕ್ಷಾಬಂಧನದ ಸಂಭ್ರಮದಲ್ಲಿ ಮಿಂದೆದ್ದೆರು. ಸಹೋದರ ಹಾಗೂ ಸಹೋದರಿಯರ ನಡುವೆ ಬಾಂಧವ್ಯ ಬೆಸೆಯುವ ಈ ಹಬ್ಬ ಜನರ ಸಡಗರಕ್ಕೂ ಕಾರಣವಾಯಿತು.

ನಗರದಲ್ಲಿ ವಿವಿಧ ಸಂಘಟನೆಗಳು ಮತ್ತು ಮಹಿಳಾ ಸಂಘಗಳ ಪದಾಧಿಕಾರಿಗಳು ರಾಖಿ ಕಟ್ಟಿದರು. ವಿಶ್ವ ಹಿಂದೂ ಪರಿಷತ್‌ ಹುಬ್ಬಳ್ಳಿ ಮಹಾನಗರ ಘಟಕವು ಕೋವಿಡ್‌ ವಾರಿಯರ್‌ಗಳಾದ ಪೊಲೀಸರು, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಸಾರಿಗೆ ನೌಕರರು ಮತ್ತು ಪತ್ರಿಕಾ ವಿತರಕರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆದರು. ವಾರಿಯರ್‌ಗಳಿಗೆ ಮಾಸ್ಕ್‌ಗಳನ್ನು ವಿತರಿಸಿಯೂ ಗಮನ ಸೆಳೆದರು

ಪರಿಷತ್‌ನ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಜಿ, ರಘು ಯಲ್ಲಕನುರ, ಸುಭಾಷ್ ಡಂಕ್, ಭೀಮಪ್ಪ, ವೆಂಕಟೇಶ, ಆನಂದ, ಗಣೇಶ, ಪ್ರಕಾಶ ಇದ್ದರು. ಮಹಿಳಾ ಸಂಘದ ಪದಾಧಿಕಾರಿಗಳು ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ರಾಖಿ ಕಟ್ಟಿದರು. ಮನೆಗಳಲ್ಲಿ ಸಹೋದರಿಯರು, ಚಿಣ್ಣರು ಸಹೋದರರಿಗೆ ತಿಲಕವಿಟ್ಟು, ರಾಖಿ ಕಟ್ಟಿ, ಆರತಿ ಬೆಳಗಿ ಪರಸ್ಪರ ಸಿಹಿ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು