ಹುಬ್ಬಳ್ಳಿ: ‘ಉಣಕಲ್ – ಸಾಯಿನಗರ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಈ ಮಾರ್ಗದಲ್ಲಿನ ಆಸ್ತಿಗಳ ಮಾಲೀಕರಿಗೆ ಸಂಬಂಧಿಸಿದ ಪರಿಹಾರ ನೀಡಿ, ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಉಣಕಲ್ ಸಾಯಿನಗರದ 3 ಕಿಮೀ., ರಸ್ತೆ ಪೂರ್ಣಗೊಂಡಿದೆ. ಇದೇ ಮಾರ್ಗದಲ್ಲಿನ ಮತ್ತೊಂದು ಭಾಗದಲ್ಲಿ ಸಾರ್ವಜನಿಕರಿಗೆ ಸೇರಿದ ಆಸ್ತಿಗಳಿದ್ದು, ಇದಕ್ಕೆ ಸಂಬಂಧಿಸಿದ ಪರಿಹಾರವನ್ನು ಮಾಲೀಕರಿಗೆ ಸಂದಾಯ ಮಾಡಿ, ರಸ್ತೆ ಕಾಮಗಾರಿ ಕೈಗೊಳ್ಳಬೇಕು‘ ಎಂದು ಹು–ಧಾ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಅವರಿಗೆ ಸೂಚಿಸಿದರು.

‘ನೀರಿನ ಪೈಪ್ ದುರಸ್ತಿಯ ಕಾರಣದಿಂದಾಗಿ ಎಲ್ ಆಂಡ್ ಟಿ ಅಧಿಕಾರಿಗಳು ಸಿಸಿ ರಸ್ತೆಗಳನ್ನು ಪದೇ ಪದೇ ಅಗೆಯುವುದರಿಂದಾಗಿ ರಸ್ತೆಗಳು ಹಾಳಾಗುತ್ತಿವೆ. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸರಿಯಾಗಿ ಪೈಪ್ಲೈನ್ ಕಾಮಗಾರಿ ಕೈಗೊಳ್ಳದ್ದಿದ್ದರೆ ಹೇಗೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ನೀರಿನ ಪೈಪ್ ದುರಸ್ತಿಗಾಗಿ ಅಗೆದ ರಸ್ತೆಗಳನ್ನು ನೀವೇ ಸರಿಪಡಿಸಬೇಕು‘ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು, ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯಕ ಆಯುಕ್ತ ಶಾಲಂ ಹುಸೇನ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗೇರಿ, ರವಿ ನಾಯ್ಕ, ಶಿವು ಪಾಟೀಲ ಹೆಸ್ಕಾಂ ಅಧಿಕಾರಿಗಳು, ಎಲ್ ಆಂಡ್ ಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರದಿಂದ 10 ಕೋಟಿ ಅನುದಾನ

ಸರ್ಕಾರದಿಂದ 10 ಕೋಟಿ ಅನುದಾನ ಬಂದಿದ್ದು ಈಗಾಗಲೇ 109 ಭೂಮಿಗಳನ್ಬ ಪರಭಾರೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಟೇoಗಿನಕಾಯಿ ತಿಳಿಸಿದರು. ಇನ್ನೂ ಬಾಕಿ ಉಳಿದಿರುವ 29 ಆಸ್ತಿಗಳ ಮಾಲಿಕರಿಗೆ ಅವರ ಪಾಲಿಗೆ ಬರುವ ಹಣವನ್ನು ಸಂದಾಯ ಮಾಡಿ ಪಾಲಿಕೆಯು ಶೀಘ್ರ ಹಸ್ತಾಂತರಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕೆಂದು ಸೂಚನೆಯನ್ನು ಆಯುಕ್ತರಿಗೆ ನೀಡಿದರು.

ಪಾಲಿಕೆಯಿಂದ ನೀರು ಸರಬರಾಜು ಮಾಡುವ ಎಲ್ ಅಂಡ್ ಟಿ ಅಧಿಕಾರಿಗಳು ಸಿಸಿ ರಸ್ತೆಗಳನ್ನು ಪದೇ ಪದೇ ಅಗೆಯುವುದರಿಂದ ರಸ್ತೆಗಳು ಹಾಳಾಗಿ ಹೋಗುತ್ತೇವೆ ರಸ್ತೆ ಮಾಡುವ ಪೂರ್ವದಲ್ಲಿಯೇ ಇದನ್ನೆಲ್ಲ ನೀವು ಗಮನಿಸಬೇಕಿತ್ತು ನೀವು ಮನೆ ಮನೆಗೆ ನೀರು ಸರಬರಾಜು ಮಾಡುವ ದೃಷ್ಟಿಯಿಂದ ನೀರಿನ ಹೊಸ ಪೈಪ್ ಗಳ ಸಂಪರ್ಕ ಕೊಡಬೇಕಾಗಿತ್ತು ಈಗ ನೀರಿನ ಸೊರಿಕೆ ಆಗುತ್ತಿದೆ ಎಂದು ಪದೇ ಪದೇ ರಸ್ತೆ ಅಗೆಯುವುದು ಸರಿಯಲ್ಲ ಎಂದು ಶಾಸಕ ಮಹೇಶ ಟೇoಗಿನಕಾಯಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇವಲ ನಾಲ್ಕು ಮನೆಗಳಿಗಾಗಿ ಟ್ಯಾಂಕರ್ ನೀರು ಪೂರೈಕೆ ಮಾಡುವುದು ನನ್ನ ಗಮನಕ್ಕೆ ಬಂದಿದೆ ನಾಲ್ಕು ಮನೆಗಳಿಗೆ ನೀರಿನ ಪೈಪ್ ಲೈನ್ ಜೋಡಿಸಲಿಕ್ಕೆ ಆಗುವುದಿಲ್ಲ ಅಂದ್ರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಗಾಳಿ ಎಲ್ ಅಂಡ್ ಟಿ ಕಂಪನಿಯವರು ಅಗೆದ ರಸ್ತೆಗಳನ್ನು ನೀವೇ ಮಾಡಿಕೊಡಬೇಕೆಂದು ಕಂಪನಿಯವರಿಗೆ ತಾಕೀತು ಮಾಡಿದರು. ಸಭೆಯಲ್ಲಿ ಸಹಾಯಕ ಆಯುಕ್ತ ಶಾಲಂ ಹುಸೇನ್ ಪಾಲಿ ಕೆ ಸದಸ್ಯರಾದ ರಾಜಣ್ಣ ಕೊರವಿ ಉಮೇಶ್ ಗೌಡ ಕೌಜಗೇರಿ ರವಿ ನಾಯ್ಕ ಶಿವು ಪಾಟೀಲ ಪಾಲಿಕೆಯ ಸಹಾಯಕ ಆಯುಕ್ತರು ಹೆಸ್ಕಾಂ ಅಧಿಕಾರಿಗಳು ಎಲ್ ಅಂಡ್ ಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.