ಗುರುವಾರ , ಮಾರ್ಚ್ 30, 2023
21 °C
14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಕ್ರಿಕೆಟ್‌ ಟೂರ್ನಿ

ಗದುಗಿನ ಸ್ಪೋರ್ಟ್ಸ್‌ ಅಕಾಡೆಮಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗದುಗಿನ ಸ್ಪೋರ್ಟ್ಸ್‌ ಅಕಾಡೆಮಿ ತಂಡ, ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ಆಯೋಜಿಸಿರುವ 14 ವರ್ಷದ ಒಳಗಿನವರ ಲೀಲಾವತಿ ಪ್ಯಾಲೇಸ್ ಕಪ್‌ ಅಂತರ ಕ್ಯಾಂಪ್ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 117 ರನ್‌ಗಳ ಜಯ ಸಾಧಿಸಿತು.

ಆರ್‌ಎಸ್‌ಐ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಗದುಗಿನ ತಂಡ 30 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 133 ರನ್ ಗಳಿಸಿತು. ಎದುರಾಳಿ ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ 11.4 ಓವರ್‌ಗಳಲ್ಲಿ 16 ರನ್‌ ಗಳಿಸಲಷ್ಟೇ ಶಕ್ತವಾಯಿತು. ಐದು ವಿಕೆಟ್‌ಗಳನ್ನು ಉರುಳಿಸಿದ ಜಾಯಿದ್ ಪಂದ್ಯ ಶ್ರೇಷ್ಠ ಗೌರವ ಪಡೆದರು.

ಇನ್ನೊಂದು ಪಂದ್ಯದಲ್ಲಿ ಚಾಂಪಿಯನ್ಸ್‌ ನೆಟ್‌ ಹುಬ್ಬಳ್ಳಿ ತಂಡ ಎಂಟು ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಧಾರವಾಡ ಕ್ರಿಕೆಟ್ ಅಕಾಡೆಮಿ 15 ಓವರ್‌ಗಳಲ್ಲಿ 33 ರನ್‌ ಗಳಿಸಿತು. ಚಾಂಪಿಯನ್ಸ್‌ ನೆಟ್‌ ತಂಡದ ಹೇತ್‌ ಪಟೇಲ್‌ ಮೂರು ಓವರ್‌ಗಳಲ್ಲಿ 7 ರನ್ ಮಾತ್ರ ನೀಡಿ ಆರು ವಿಕೆಟ್‌ ಕಬಳಿಸಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್‌ ಮಾಡಿದರು. ಇದರಿಂದ ಪಂದ್ಯ ಶ್ರೇಷ್ಠ ಗೌರವ ಕೂಡ ಪಡೆದರು.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಬೆಳಗಾವಿಯ ಆನಂದ ಕ್ರಿಕೆಟ್‌ ಕೋಚಿಂಗ್‌ ಅಕಾಡೆಮಿ 36 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಈ ತಂಡ 30 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತ್ತು. ಎದುರಾಳಿ ಹುಬ್ಬಳ್ಳಿಯ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ 25.4 ಓವರ್‌ಗಳಲ್ಲಿ 98 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಬೆಳಗಾವಿ ತಂಡದ ಓಂ ಜಕಾತಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಿಡಿಕೆ 30 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸಿತ್ತು. ಎದುರಾಳಿ ಬೆಳಗಾವಿಯ ಯೂನಿಯನ್‌ ಜಿಮ್ಖಾನಾ ತಂಡ 24.1 ಓವರ್‌ಗಳಲ್ಲಿ 99 ರನ್‌ ಗಳಿಸಿ ಆಲೌಟ್‌ ಆಯಿತು. ಇದರಿಂದ ಬಿಡಿಕೆ ತಂಡಕ್ಕೆ 57 ರನ್‌ಗಳ ಜಯ ಸಾಧ್ಯವಾಯಿತು. ಅರ್ಧಶತಕ (65) ಗಳಿಸಿ ಎರಡು ವಿಕೆಟ್‌ ಉರುಳಿಸಿದ ಈ ತಂಡದ ಭುವನ ಬಿ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು