ಸೋಮವಾರ, ಜುಲೈ 4, 2022
20 °C
ವಿವಿಧೆಡೆ ರಾಷ್ಟ್ರೀಯ ಮತದಾರರ ದಿನ ಆಚರಣೆ

ದೇಶದ ಅಭಿವೃದ್ಧಿಗೆ ಮತದಾನವೇ ಶಕ್ತಿ: ಪ್ರಕಾಶ ನಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ವಿವಿಧೆಡೆ ಮಂಗಳವಾರ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಮತದಾನ ಮಹತ್ವ ಸಾರಲಾಯಿತು.

ಮಿನಿವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಕಾನೂನು ಸೇವಾಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ‘ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಈ ಬಾರಿ ‘ಬಲವಾದ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ’ ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ’ ಎಂದರು.

ತಾಲ್ಲೂಕು ಕಾನೂನು ಸೇವಾ ಸಮಿತಿಯ ಶ್ರೀಧರ ಎಂ.ದೊಡಮನಿ ಮಾತನಾಡಿ ‘ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರು ಇದ್ದರು.

ಚಿನ್ಮಯ ಕಾಲೇಜು: ಚಿನ್ಮಯ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿ ಶರ್ಮಿಲೆ ನಾಯ್ಡು ‘ಪ್ರಜಾಪ್ರಭುತ್ವದ ಉಳಿವಿಗೆ ಮತದಾನದ ಹಕ್ಕು ಹೊಂದಬೇಕು’ ಎಂದರು.

ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಚಂದ್ರಶೇಖರ ಚನ್ನಂಗಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ನಾಯಕ ಬಿಕೆ, ಕೃಷ್ಣಪ್ಪ ಮಲ್ಲಣ್ಣವರ, ಶೋಭಾನಾ ಶಿಂಧೆ, ಅಕ್ಷತಾ ಮೆಹರವಾಡೆ ಇದ್ದರು.

ಫಾತಿಮಾ ಶಾಲೆ: ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಕೇಶ್ವಾಪುರದ ಫಾತಿಮಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಮಾತನಾಡಿ ‘ಬ್ಯಾಲೆಟ್‌ಗೆ ಬುಲೆಟ್‌ಗಿಂತಲೂ ಹೆಚ್ಚಿನ ಶಕ್ತಿಯಿದೆ’ ಎಂದರು.

ಫಾತಿಮಾ ಶಾಲೆಯ ಚುನಾವಣಾ ಮತದಾರರ ಸಂಘದ ಸಂಯೋಜಕಿ ರೆಜೆನಾ ಕಾರನೂರ್‌, ಮುಖ್ಯ ಶಿಕ್ಷಕಿ ಮೈಕಲ್‌ ಸೂಜಾ, ನಗರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್‌. ಶಿವಳ್ಳಿಮಠ, ಸಂಘದ ತಾಲ್ಲೂಕು ನೋಡಲ್‌ ಅಧಿಕಾರಿ ವನಿತಾ ಆರ್‌. ಶಿಕ್ಷಣ ಸಂಯೋಜಕಿ ಪ್ರಭಾಕರ ಜಿ., ಶಿಕ್ಷಕರಾದ ಮಾಯಾ ಸುಬ್ರಮಣ್ಯಂ, ಶಿವನಗೌಡ್ರ ಮರಿಗೌಡರ ಪಾಲ್ಗೊಂಡಿದ್ದರು.

ದೇಶದ ಅಭಿವೃದ್ಧಿ: ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.

ಸಂಪನ್ಮೂಲ ವ್ಯಕ್ತಿ ಡಾ. ದಾನೇಶ್ವರ ಪಿ .ಚೌರಿ ಮಾತನಾಡಿದರು. ಕಾನೂನು ಪ್ರಾಧ್ಯಾಪಕ ಪ್ರೊ. ಸ್ವಪ್ನ ಸೋಮಯಾಜಿ, ಡಾ. ಲಿಂಗರಾಜ ಅಂಗಡಿ, ದೀಪು ಬಣಕಾರ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ. ಶಿವಲೀಲಾ ವೈಜಿನಾಥ, ವೈಷ್ಣವಿ ಕುಲಕರ್ಣಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಮಹಾದೇವ ಹರಿಜನ, ಮಮತಾ ಜಡಿ, ಡಾ. ಸಿಸೀಲಿಯಾ ಡಿಕ್ರೂಜ್, ಡಾ. ಜ್ಯೋತಿ ಲಕ್ಷ್ಮಿ ಡಿ. ಪಿ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಪ್ರೊ. ಸಿ.ಕೆ ಶಶಾಂಕ್ , ಪ್ರೊ ಸುಷ್ಮಿತಾ, ಗಿರೀಶ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು