ಶಿರಹಟ್ಟಿ: ‘ಹಿಂದೂ ಮುಖಂಡರುಗಳ ಮೇಲೆ ವಿನಾಃಕಾರಣ ಪ್ರಕರಣ ದಾಖಲು ಹಾಗೂ ಜಾತಿ ಗಣತಿಯಲ್ಲಿ ಹಿಂದೂ ಉಪಜಾತಿಗಳ ಹಿಂದೆ ಕ್ರೈಸ್ತ ಪದ ಸೇರಿಸಿದ್ದನ್ನು ಖಂಡಿಸಿ ಸೆ.20ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಸಂತೋಷ ಕುರಿ ಕರೆ ನೀಡಿದರು.

ಸ್ಥಳೀಯ ನಿರೀಕ್ಷಣಾ ಮಂದಿರದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದೂ ಪರ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮೂಲಕ ವಿನಾಃಕಾರಣ ಪ್ರಕರಣ ದಾಖಲಿಸುತ್ತಿದ್ದಾರೆ. ಜಾತಿ ಗಣತಿಯಲ್ಲಿ ಉಪಜಾತಿಗಳ ಹಿಂದೆ ಕ್ರೈಸ್ತ ಪದ ಸೇರಿಸಿ ಹೊಸ ಉಪಜಾತಿ ಸೃಷ್ಟಿಸಿರುವುದು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನದಿಂದ ಬೆಳಿಗ್ಗೆ 10:30 ಗಂಟೆಗೆ ಪ್ರತಿಭಟನೆ ಪ್ರಾರಂಭಗೊಂಡು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುತ್ತದೆ. ಪ್ರತಿಭಟನೆಗೆ ತಾಲ್ಲೂಕಿನ ವಿವಿಧ ಹಿಂದೂಪರ ಸಂಘಟನೆಗಳು, ಗ್ರಾಮೀಣ ಸಂಘಟನೆಗಳು ಭಾಗವಹಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಈ ವೇಳೆ ರಾಮಣ್ಣ ಕಂಬಳಿ, ರಾಜೀವರಡ್ಡಿ ಬೊಮ್ಮನಕಟ್ಟಿ, ಪ್ರಕಾಶ ಕಲ್ಯಾಣಿ, ಅರುಣ ತಿರ್ಲಾಪುರ, ಪರಶುರಾಮ ಡೊಂಕಬಳ್ಳಿ, ದೇವು ಪೂಜಾರ, ಸಂತೋಷ ತೊಡೆಕರ, ಮಂಜುನಾಥ ಸೊಂಟನೂರ, ಮಂಜುನಾಥ ಕಾಳಗಿ, ಯಲ್ಲಪ್ಪ ಇಂಗಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.