ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭ್ರಷ್ಟ: ಸಿದ್ದರಾಮಯ್ಯ ವಾಗ್ಧಾಳಿ

ವಿರೋಧ ಪಕ್ಷದ ನಾಯಕ
Last Updated 27 ಜುಲೈ 2021, 4:30 IST
ಅಕ್ಷರ ಗಾತ್ರ

ಗದಗ: ‘ಯಡಿಯೂರಪ್ಪ ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಹೊಸ ಮುಖ್ಯಮಂತ್ರಿ ಬರುವುದರಿಂದ ರಾಜ್ಯಕ್ಕೇನು ಒಳ್ಳೆಯದಾಗುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಸೋಮವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಬಿ.ಎಸ್‌.ಯಡಿಯೂರಪ್ಪ ಅವರು ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಬರುವ ಮತ್ತೊಬ್ಬ ಸಿಎಂ ಕೂಡ ಭ್ರಷ್ಟರಾಗಿಯೇ ಇರುತ್ತಾರೆ. ಬಿಜೆಪಿಯೇ ಭ್ರಷ್ಟ ಪಕ್ಷ. ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿ ಇಲ್ಲ. ಸರ್ಕಾರದ ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆಯನ್ನು ಬಯಲು ಮಾಡುವುದೇ ನಮ್ಮ ಗುರಿ’ ಎಂದು ಅವರು ಗುಡುಗಿದರು.

‘ಸ್ವಾಮೀಜಿಗಳು ರಾಜಕಾರಣ ಮಾಡದೇ ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆಯುವುದು ಒಳ್ಳೆಯದು. ವಲಸೆ ಹೋದ ಶಾಸಕರಿಗೆ ಜನರೇ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಜನರು ಅಭಿಮಾನದಿಂದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದರೆ ಅದಕ್ಕೆ ನಾನೇನು ಮಾಡಲು ಸಾಧ್ಯ? ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಹಾಗೂ ನೂತನ ಶಾಸಕರು ನಿರ್ಧರಿಸುತ್ತಾರೆ’ ಎಂದು ಹೇಳಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT