ಲಕ್ಷ್ಮೇಶ್ವರ: ‘ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯಲ್ಲಿ ಶಾಂತಿ ಕದಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು. ತಾಲ್ಲೂಕಿನಲ್ಲಿ 185 ಕಡೆ ಸಾರ್ವಜನಿಕ ಗಣೇಶನ ಮೂರ್ತಿಗಳ ಪ್ರತಿಷ್ಠಾಪಿಸಲಾಗುತ್ತಿದ್ದು, ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಗಣಪತಿ ಪೆಂಡಾಲ್ಗಳಲ್ಲಿ ಇಸ್ಪೀಟ್ ಆಡಬಾರದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಭಾನುವಾರ ನಡೆದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಬ್ಬದ ಅಂಗವಾಗಿ ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವರಿಗೆ ಸ್ವಾಗತ. 200 ಯುವಕರು ಒಂದೇ ತರನಾದ ಟೀ ಶರ್ಟ್ ಧರಿಸಿ ಸ್ವಯಂ ಸೇವಕರಾಗಬಹುದು. ತಾಲ್ಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ಸೋಮೇಶ ಉಪನಾಳ ಹಾಗೂ ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಮಾತನಾಡಿ, ‘ಗಣಪತಿ ಹಬ್ಬ ಹಿಂದೂಗಳ ಪಾಲಿಗೆ ಮಹತ್ವವಾಗಿದ್ದು, ಸಂಭ್ರಮ, ಶಾಂತಿಯಿಂದ ಹಬ್ಬ ಆಚರಿಸಬೇಕು. ಇತ್ತೀಚಿನ ದಿನಗಳಲ್ಲಿ ಹಬ್ಬದ ಆಚರಣೆ ಮಹತ್ವ ಕಳೆದುಕೊಳ್ಳುತ್ತಿರುವುದು ವಿಷಾದನೀಯ’ ಎಂದರು.

ಪುರಸಭೆ ಸದಸ್ಯರಾದ ಜಯಕ್ಕ ಕಳ್ಳಿ ಹಾಗೂ ಸಾಯಿಬ್ಜಾನ್ ಹವಾಲ್ದಾರ್ ಮಾತನಾಡಿ, ‘ಈದ್ ಮಿಲಾದ್ ಹಾಗೂ ಗಣಪತಿ ಹಬ್ಬ ಎರಡು ಸಮುದಾಯಗಳ ಪವಿತ್ರ ಹಬ್ಬವಾಗಿದ್ದು, ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು’ ಎಂದರು.

ಚಂಬಣ್ಣ ಬಾಳಿಕಾಯಿ, ಕರೀಂಸಾಬ್ ಕರೀಂಖಾನವರ, ಮಂಜುನಾಥ ಮಾಗಡಿ, ಗಂಗಾಧರ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ, ಶರಣು ಗೋಡಿ, ಬಸವರಾಜ ಹೊಗೆಸೊಪ್ಪಿನ, ಈರಣ್ಣ ಪೂಜಾರ ಮಾತನಾಡಿದರು. ಡಿವೈಎಸ್ಪಿ ಮೂರ್ತುಜಾ, ಡಿವೈಎಸ್ಪಿ ವಿದ್ಯಾನಂದ್ ನಾಯಕ್, ಗ್ರೇಡ್-2 ತಹಶೀಲ್ದಾರ್ ಮಂಜುನಾಥ ಅಮಾಸಿ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡದ, ಯಲ್ಲವ್ವ ದುರ್ಗಣ್ಣವರ, ಮಂಜುನಾಥ ಮುದಗಲ್ಲ, ನೀಲಪ್ಪ ಕರ್ಜೆಕಣ್ಣವರ, ಶಿವಣ್ಣ ಡಂಬಳ, ಮಹೇಶ ಕಲಘಟಗಿ, ಥಾವರಪ್ಪ ಲಮಾಣಿ, ಬಸವರಾಜ ಹೊಗೆಸೊಪ್ಪಿನ, ಫಕ್ಕೀರೇಶ ಭಜಕ್ಕನವರ, ಸದಾನಂದ ನಂದೆಣ್ಣವರ, ಪ್ರಕಾಶ ಮಾದನೂರ, ಜಗದೀಶಗೌಡ ಪಾಟೀಲ ಮಹೇಶ ಹೊಗೆಸೊಪ್ಪಿನ, ಜಾಕೀರ ಹವಾಲ್ದಾರ, ನೀಲಪ್ಪ ಶರಸೂರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.