ಮುಳಗುಂದ (ಗದಗ ಜಿಲ್ಲೆ): ಇಲ್ಲಿಗೆ ಸಮೀಪದ ಹೊಸೂರ ಗ್ರಾಮದ ಬಸಪ್ಪ ಫಕ್ಕಿರಪ್ಪ ಆದಿಯವರ ಮನೆಯಲ್ಲಿ ಭಾನುವಾರ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ಸ್ಪೋಟದಿಂದಾಗಿ ಬಾಲಕ ಸೇರಿ ಆರು ಮಂದಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ.

ಅನಿಲ ಸೋರಿಕೆಯಿಂದ ವಾಸನೆ ಬರುವುದನ್ನು ಗಮನಿಸಿ, ಪಕ್ಕದ ಮನೆಯವರು ಬಂದು ಮುಚ್ಚಿದ್ದ ಬಾಗಿಲು ತೆಗೆದಾಗ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ಬಟ್ಟೆ, ದವಸ ಧಾನ್ಯ, ಪಾತ್ರೆಗಳು, ಆಹಾರ ಪಾರ್ಥಗಳು ಸುಟ್ಟು ಕರಕಲಾಗಿವೆ. ಮನೆಯ ಚಾವಣಿ ಕಿತ್ತು ಹೋಗಿದೆ ಎಂದು ಪ್ರತ್ಯಕ್ಷದರ್ಶಿ ಮಹೇಶ ತಿಳಿಸಿದ್ದಾರೆ.

ಶರಣಪ್ಪ ಡಾಲಿನ (14), ಶಿವಪ್ಪ ಡಾಲಿನ (25), ಮಂಜುಳಾ ಆದಿಯವರ (30), ನಿರ್ಮಲಾ ಡಾಲಿನ (28), ಶೇಖವ್ವ ಹೊರಪೇಟಿ (75) ಹಾಗೂ ಮುಳಗುಂದ ನಿವಾಸಿ ಲಕ್ಷ್ಮವ್ವ ಕಣವಿ (60)ಗಾಯಗೊಂಡವರು. ಗಾಯಾಳುಗಳನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಮುಳಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.