ಗದಗ: ‘ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಯು ಸೆ.22ರಿಂದ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಗತಿ ಕುರಿತ ಸಮೀಕ್ಷೆ ವೇಳೆ ರಾಜ್ಯದಲ್ಲಿರುವ ನದಾಫ, ಪಿಂಜಾರ ಸಮುದಾಯದವರು ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಾಲಂನಲ್ಲಿ ನದಾಫ ಅಥವಾ ಪಿಂಜಾರ ಎಂದು ಬರೆಸಬೇಕು ಎಂದು ಕರ್ನಾಟಕ ರಾಜ್ಯ ನದಾಫ, ಪಿಂಜಾರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಫ್.ಹಳ್ಯಾಳ ಮನವಿ ಮಾಡಿದರು.

‘ಅ.7ರವರೆಗೆ ನಡೆಯುವ ಸಮೀಕ್ಷೆ ವೇಳೆ ಮನೆ ಬಾಗಿಲಿಗೆ ಸಮೀಕ್ಷಾದಾರರು ಬಂದಾಗ ಧರ್ಮದ ಕಾಲಂನಲ್ಲಿ (ಫಾರಂನ ಕಾಲಂ ಸಂಖ್ಯೆ 8ರ ಮುಂದೆ) ಎರಡನೇ ನಂಬರ್ನ ಇಸ್ಲಾಂ ಎಂದೂ, ಜಾತಿ ಕಾಲಂನಲ್ಲಿ (ಫಾರಂನ ಕಾಲಂ ಸಂಖ್ಯೆ 9ರ ಮುಂದೆ) ಎ-1174 ರಲ್ಲಿ ಪಿಂಜಾರ ಅಥವಾ ಎ-1022ರಲ್ಲಿ ನದಾಫ ಎಂದು ಕಡ್ಡಾಯವಾಗಿ ಬರೆಯಿಸಬೇಕು. ಕುಲಕಸುಬು ಕಾಲಂನಲ್ಲಿ (ಫಾರಂನ ಕಾಲಂ ಸಂಖ್ಯೆ 30ರ ಮುಂದೆ) ಹತ್ತಿ ಶುದ್ಧಗೊಳಿಸುವುದು ಎಂದು ತಪ್ಪದೇ ಬರೆಸಬೇಕು ಎಂದು ತಿಳಿಸಿದರು.

ಈಗಾಗಲೇ ನಾವು ಪ್ರವರ್ಗ-1 ಹಾಗೂ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಹಿಂದುಳಿದ ಒಬಿಸಿಯಲ್ಲಿ ರಾಜ್ಯ ಮತ್ತು ಕೇಂದ್ರದ ಹಿಂದುಳಿದ ವರ್ಗಗಳ ಇಲಾಖೆಗಳ ಮೂಲಕ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದೇವೆ. ಈ ಮೀಸಲಾತಿ ಸೌಲಭ್ಯಗಳ ಆಧಾರದ ಮೇಲೆ ನಮ್ಮ ಸಮಾಜಕ್ಕೆ ಮುಂದಿನ ಭವಿಷ್ಯದಲ್ಲಿ ಉಪಯುಕ್ತವಾಗುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಮ್ಮ ಮನೆ ಬಾಗಿಲಿಗೆ ಬಂದಾಗ ಪ್ರತಿ ಕುಟುಂಬವೂ ಪಾಲ್ಗೊಂಡು ಧರ್ಮ, ಜಾತಿ ಹಾಗೂ ಕುಲಕಸುಬು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ನದಾಫ, ಪಿಂಜಾರ ಸಂಘದ ಅಧ್ಯಕ್ಷ ಜಲೀಲಸಾಬ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಂ. ಗಾಡಗೋಳಿ, ಗದಗ ವಿಭಾಗೀಯ ಉಪಾಧ್ಯಕ್ಷ ಪಿ. ಇಮಾಮ್ಸಾಬ, ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕ ರಾಜು ಎಂ. ಹೆಬ್ಬಳ್ಳಿ, ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಪಿ.ಅತ್ತಿಗೇರಿ, ರಾಜಭಕ್ಷಿ ಹರ್ಲಾಪೂರ, ಜಿಲ್ಲಾ ಕಾರ್ಯದರ್ಶಿ ಎಂ.ಬಿ.ನದಾಫ ವಕೀಲರು, ಖಜಾಂಚಿ ಶೌಕತ್ ಅಲಿ ಎಂ. ಅಣ್ಣಿಗೇರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾಜಬಿ ದಾ.ನದಾಫ, ಕಾರ್ಯದರ್ಶಿ ರಹಿಮಾನಬಿ ನದಾಫ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಾಸಿಮಸಾಬ ಪಿಂಜಾರ (ರೋಣ), ದಾವಲಸಾಬ ನದಾಫ (ಶಿರಹಟ್ಟಿ), ಬಾಬಾನಸಾಬ ನದಾಫ (ಗಜೇಂದ್ರಗಡ), ಅಪ್ಪಾಸಾಬ ನದಾಫ (ಗದಗ ಗ್ರಾಮೀಣ), ರಾಯಸಾಬ ನದಾಫ (ನರಗುಂದ), ರಮಜಾನಸಾಬ ನದಾಫ (ಲಕ್ಷ್ಮೇಶ್ವರ), ಮೈನುದ್ದಿನ ಬಿಜಾಪುರ (ಗದಗ ಬೆಟಗೇರಿ ಶಹರ) ಹಾಗೂ ಮೌಲಾಸಾಬ ನದಾಫ (ಮುಂಡರಗಿ) ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.