ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ: ಉದ್ಯಾನಕ್ಕೆ ಯುದ್ಧ ವಿಮಾನ ತರಲು ₹2.20 ಕೋಟಿ ಖರ್ಚು

ಶಿವಾಜಿ ಮಹಾರಾಜ ಉದ್ಯಾನ ಕಾಮಗಾರಿಗೆ ಚಾಲನೆ ನೀಡಿ ಶಾಸಕಿ ಜೊಲ್ಲೆ ಹೇಳಿಕೆ
Published 15 ಮಾರ್ಚ್ 2024, 15:46 IST
Last Updated 15 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ನಿಪ್ಪಾಣಿ: ‘ನಗರದ ಅಭಿವೃದ್ಧಿ ಜೊತೆಗೆ ಸೌಂದರ್ಯೀಕರಣಕ್ಕೂ ಒತ್ತು ನೀಡಲಾಗುತ್ತಿದ್ದು ಯುದ್ಧ ವಿಮಾನದ ಸುತ್ತಲೂ ನಿರ್ಮಾಣಗೊಳ್ಳಲಿರುವ ವೈವಿಧ್ಯಮಯ, ಸುಂದರವಾದ ‘ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವ ನಗರದ ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಲಿದ್ದು, ಇದನ್ನು ಶೈಕ್ಷಣಿಕ ಪ್ರವಾಸ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ವಾರ್ಡ್ ನಂ.25ರಲ್ಲಿ 15ನೇ ಹಣಕಾಸಿನ ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರಕ್ಕೆ ಯುದ್ಧವಿಮಾನವನ್ನು ಕಲ್ಪಿಸಲು ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕೇಂದ್ರ ಗೃಹಸಚಿವರನ್ನು ಮನವಿ ಮಾಡಿಕೊಂಡ ಮೇರೆಗೆ ಅವರು ಒಂದು ತಿಂಗಳೊಳಗಾಗಿ ಅದಕ್ಕೆ ಹಸಿರು ನಿಶಾನೆ ಕೊಟ್ಟರು. ಈ ಯುದ್ಧವಿಮಾನವನ್ನು ಇಲ್ಲಿ ತರಲು ಒಟ್ಟು ₹ 2.5 ಕೋಟಿ ವೆಚ್ಚ ಆಗಿದೆ. ಅದಕ್ಕಾಗಿ ಸಂಸದರ ಮತ್ತು ಶಾಸಕರ ಅನುದಾನದಲ್ಲಿ ತಲಾ ₹ 1 ಕೋಟಿ ಮತ್ತು ನಗರಸಭೆಯಿಂದ ₹ 50 ಲಕ್ಷ ಅನುದಾನ ಕಲ್ಪಿಸಲಾಗಿದೆ. ಉದ್ಯಾನಕ್ಕಾಗಿ ಮೊದಲನೇಯ ಹಂತದಲ್ಲಿ ₹ 20 ಲಕ್ಷ   ಹಾಗೂ ಮುಂದಿನ ಹಂತಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು. ಅಲ್ಲದೆ ರಸ್ತೆ ಬದಿಗೆ ‘ತಿನಿಸು ಕಟ್ಟೆ(ಖಾವು ಕಟ್ಟಾ) ನಿರ್ಮಿಸಲಾಗುವುದು’ ಎಂದರು.

ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಸದಸ್ಯ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ನೀತಾ ಬಾಗಡೆ, ಕಾವೇರಿ ಮಿರ್ಜೆ, ಪ್ರಭಾವತಿ ಸೂರ್ಯವಂಶಿ, ವಿಭಾವರಿ ಖಾಂಡಕೆ, ಮಾಜಿ ಸದಸ್ಯ ವಿಜಯ ಟವಳೆ, ಪ್ರಣವ ಮಾನವಿ, ಅಭಿಜಿತ್‌ ಮುದುಕುಡೆ, ಸಚಿನ ಥೋರವತ, ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT