ಸಕಲೇಶಪುರ: ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ಪಟ್ಟಣದ ಕಾಫಿ ಪೌಡರ್ ಅಂಗಡಿಯೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.

ಹಳೆ ಬಸ್ ನಿಲ್ದಾಣ ಮುಂಭಾಗ ಹೇಮಾವತಿ ಕಾಂಪ್ಲೆಕ್ಸ್ನಲ್ಲಿ ಎಸ್.ಕೆ. ಆನಂದ್ ಅವರ ‘ಮೂರ್ತಿಸ್ ಗೋಲ್ಡನ್’ ಕಾಫಿ ಪುಡಿ ಅಂಗಡಿ ಬೆಂಕಿಯಿಂದ ಸುಟ್ಟು ಹೋಗಿದೆ. ಸುಮಾರು 100 ಕೆ.ಜಿ. ಕಾಫಿ ಬೀಜ, ಮಾರಾಟ ಮಾಡಲು ಸಿದ್ಧಗೊಳಿಸಿ ಪ್ಯಾಕೆಟ್ನಲ್ಲಿ ಇಟ್ಟಿದ್ದ ಸುಮಾರು 250 ಕೆ.ಜಿ ಕಾಫಿ ಪೌಡರ್, ಪೀಠೋಪಕರಣಗಳು, ವಿದ್ಯುತ್ ವೈರಿಂಗ್, ಸಿಸಿಟಿವಿ ಕ್ಯಾಮೆರಾ, ಟಿವಿ ಸೇರಿದಂತೆ ಸುಮಾರು ₹ 10 ಲಕ್ಷ ಮೌಲ್ಯಕ್ಕೂ ಹೆಚ್ಚು ಹಾನಿಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಸಂಪೂರ್ಣ ಸುಟ್ಟುಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.