ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಕ್ಕೆ ತೆಂಗು ಉತ್ಪನ್ನ ರಫ್ತಿಗೆ ಅವಕಾಶ: ಸಚಿವೆ ಶೋಭಾ ಕರಂದ್ಲಾಜೆ

Last Updated 17 ಆಗಸ್ಟ್ 2021, 15:08 IST
ಅಕ್ಷರ ಗಾತ್ರ

ಹಾಸನ: ತೆಂಗು ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಕೇಂದ್ರ ಅನುಮತಿ ನೀಡಿದೆ ಎಂದು ಕೇಂದ್ರಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಈವರೆಗೂ ದೇಶದೊಳಗೆ ಮಾತ್ರ ತೆಂಗು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇತ್ತು. ವಿದೇಶಕ್ಕೆ ರಫ್ತುಮಾಡುವುದರಿಂದ ಕೊಬ್ಬರಿ ದರ ಹೆಚ್ಚುವುದರ ಜತೆಗೆ ತೆಂಗು ಬೆಳೆಗಾರರಿಗೂ ಅನುಕೂಲವಾಗಲಿದೆ.ತೆಂಗು ಅಭಿವೃದ್ಧಿ ಮಂಡಳಿಗೆ ಐಎಎಸ್‌ ಅಧಿಕಾರಿಗಳು ಮಾತ್ರ ಅಧ್ಯಕ್ಷರಾಗುತ್ತಿದ್ದರು. ಇನ್ನು ಮುಂದೆ ರೈತರುಅಧ್ಯಕ್ಷರಾಗಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜತೆ ಅಂತಹಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇಶದಲ್ಲಿ ಆಹಾರಉತ್ಪಾದನೆ ಹೆಚ್ಚಾಗಿದೆ. ಆಲೂಗಡ್ಡೆ, ಶುಂಠಿ, ಅರಿಶಿನ ಸೇರಿದಂತೆ ಇತರೆ ಪದಾರ್ಥಗಳು ರಫ್ತು ಮಾಡಲುಬೇಕಾದ ತಂತ್ರಜ್ಞಾನ ಬಗ್ಗೆ ರೈತರಿಗೆ ಮಾಹಿತಿ ಮತ್ತು ಸಹಕಾರ ನೀಡಲಾಗುವುದು. ಎಪಿಎಂಸಿ ಕಾಯ್ದೆರದ್ದಾದ ಬಳಿಕ ಮುಂಬೈ ಟ್ರಕ್‌ ಮಂಡ್ಯ ಬರಲಾರಂಭಿಸಿವೆ. ಮಂಡ್ಯ ಬೆಲ್ಲ ಮುಂಬೈಗೆ ರಫ್ತು ಆಗುತ್ತಿದೆ
ಎಂದು ವಿವರಿಸಿದರು.

ಕೃಷಿ ರಫ್ತಿಗೆ ಆದ್ಯತೆ ನೀಡುವ ಸಲುವಾಗಿ ಪ್ರತ್ಯೇಕ ತಂಡ ನೀಡುವಂತೆ ಕೈಗಾರಿಕೆ ಸಚಿವರಿಗೆ ಮನವಿಮಾಡಲಾಗಿದೆ. ಬೆಳೆ ನಾಶವಾದ ಎರಡು ತಿಂಗಳಲ್ಲಿ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಫೋಟೋ ತೆಗೆದುಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಎಷ್ಟೋ ರೈತರಿಗೆ ಬೆಳೆ ವಿಮೆ ಬಗ್ಗೆ ಮಾಹಿತಿ ಕೊರತೆ ಇದೆಎಂದರು.

ಅಫ್ಗಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ತಾಲಿ ಬಾನ್‌ ಸಂಘಟನೆ ಪ್ರಪಂಚಕ್ಕೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಮೇಕೆದಾಟು ಯೋಜನೆಯಿಂದ ಯಾರಿಗೂ ನಷ್ಟವಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT