ಹೊಳೆನರಸೀಪುರ: ಪಟ್ಟಣದ ಕೋಟೆ ಒಗ್ಗರಣೆ ಬಾವಿ ಬೀದಿಯ ನಿವೃತ್ತ ಪೊಲೀಸ್ ಪುಟ್ಟರಾಜು ಅವರ ಮನೆಯಲ್ಲಿ ಬಾಡಿಗೆಗಿರುವ ವ್ಯಕ್ತಿಯೊಬ್ಬರು ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ಗೆ ಹಾಗೂ ಮನೆಯ ಬಾಗಿಲಿಗೆ ಸೋಮವಾರ ರಾತ್ರಿ ವೇಳೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ.

ಬೆಂಕಿಗೆ ಸ್ಕೂಟರ್ ಬಹುತೇಕ ಸುಟ್ಟು ಹೋಗಿದೆ. ಬಾಗಿಲು ಉರಿಯುವುದನ್ನು ಕಂಡು ಅಕ್ಕಪಕ್ಕದವರು ಬೆಂಕಿ ನಂದಿಸಿದ್ದಾರೆ. ಪಟ್ಟಣದಲ್ಲಿ ಮೇಲಿಂದ ಮೇಲೆ ಇಂತಹ ಪ್ರಕರಣಗಳು ನಡೆಯುತ್ತಿದ್ದು ಜನರು ಆತಂಕಗೊಂಡಿದ್ದಾರೆ.

ಕಳೆದೆರೆಡು ದಿನಗಳ ಹಿಂದೆ ಜಾಂದಾಳು ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದ ಅಂಗವಿಕಲ ಮೆಹಬೂಬ್ ಷರೀಫ್ ಸಾಲ ಕೇಳಿದ ಎನ್ನುವ ಕಾರಣಕ್ಕೆ ಸಾಲ ಪಡೆದಿದ್ದ ಅದೇ ಗ್ರಾಮದ ಸುಭಾನ್ ಅಂಗವಿಕಲ ಮೆಹಬೂಬ್ ಮೇಲೆ ಹಲ್ಲೆ ನಡೆಸಿದ್ದಲ್ಲೇ ಸರ್ಕಾರದಿಂದ ಅವರಿಗೆ ನೀಡಿದ್ದ ಅಂಗವಿಕಲರ ತ್ರಿಚಕ್ರ ವಾಹನಕ್ಕೂ ರಾತ್ರಿ ಬೆಂಕಿ ಹಚ್ಚಿದ್ದಾನೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಭಾನ್ ತಲೆಮರೆಸಿಕೊಂಡಿದ್ದಾನೆ.

‘ಜಾಂದಾಳು ಗ್ರಾಮದಲ್ಲಿ ಇತ್ತೀಚೆಗೆ ಗಲಾಟೆ, ಹೊಡೆದಾಟಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಇಲ್ಲಿನ ಕೆಲವರು ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿದ್ದು ಈ ಗ್ರಾಮದಲ್ಲಿ ಹೆಚ್ಚೆ ಹೆಚ್ಚೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.