ಹೊಳೆನರಸೀಪುರ: ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಪ್ರತಿಷ್ಠಾಪಿಸಿದ್ದ 68ನೇ ಗಣೇಶೋತ್ಸವಕ್ಕೆ ಭಾನುವಾರ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಸಿ ಗಣೇಶನನ್ನು ವಿಸರ್ಜಿಸಿ ಗಣೇಶೋತ್ಸವಕ್ಕೆ ತೆರೆ ಎಳೆಯಲಾಯಿತು.

ಶನಿವಾರ ರಾತ್ರಿ ವಿದ್ಯುತ್ ದೀಪಾಲಂಕೃತ ಲಾರಿಯಲ್ಲಿ ಗಣೇಶನನ್ನು ಇಟ್ಟು ವಿವಿಧ ಬಗೆಯ ಹೂವುಗಳಿಂದ ಸಿಗಂರಿಸಿ ರಾತ್ರಿ 7ಕ್ಕೆ ವೇಳೆಗೆ ಗಣೇಶನ ಉತ್ಸವ ಹೊರಡಿಸಿದರು. ಪೂಜಾ ಕುಣಿತ, ವೀರಗಾಸೆ, ಡೊಳ್ಳುಕುಣಿತ, ತಮಟೆ ವಾಧ್ಯ, ಮಂಗಳವಾದ್ಯ, ದೊಡ್ಡ ದೊಡ್ಡ ಬೆಂಬೆಗಳ ಕುಣಿತ, ಕೀಲು ಕುದುರೆ, ಚೆಂಡೆವಾದ್ಯ, ಯಕ್ಷಗಾನ ಕುಣಿತ, ವಿವಿಧ ದೇವರ ಸ್ಥಬ್ದ ಚಿತ್ರಗಳ ಜೊತೆಯಲ್ಲಿ ಸಾಗಿದ ಉತ್ಸವ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾಗಿ ಹೌಸಿಂಗ್ ಬೋರ್ಡ್ ಮೂಲಕ ಅಂಬೇಡ್ಕರ್ ನಗರದವರೆಗೂ ಹೋಗಿ ಬೆಳಿಗ್ಗೆ 5ಕ್ಕೆ ಉತ್ಸವ ನಡೆಯಿತು.

ಭಾನುವಾರ ಮಧ್ಯಾಹ್ನ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಸಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. 1 ತಿಂಗಳ ಕಾಲ ಗಣಪತಿ ಪೆಂಡಾಲ್ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ, ಶಾಲಾ ಕಾಲೇಜು ವಿದ್ಯಾರ್ಥಿಗಳ, ವೈದ್ಯರ ನೃತ್ಯಗಳು, ನಾಟಕಗಳು, ಪ್ರತೀದಿನ ನೂರಾರು ಜನರಿಗೆ ಪ್ರಸಾದ ವಿನಿಯೋಗ, ಮಹಾಗಣಪತಿ ಹೋಮ, ಬೃಹತ್ ಅನ್ನ ಸಂತರ್ಪಣೆ ಗಣೇಶೋತ್ಸವಕ್ಕೆ ಮೆರಗು ನೀಡಿದವು.

ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಟಿ. ಶಿವಕುಮಾರ್, ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಖಜಾಂಚಿ ಎಸ್.ಗೋಕುಲ್, ಸುರೇಶ್ಕುಮಾರ್, ವೈ.ವಿ ಚಂದ್ರಶೇಖರ್, ಎ. ಜಗನ್ನಾಥ್, ಶಿವಕುಮಾರ್, ಆರ್.ಬಿ. ಪುಟ್ಟೇಗೌಡ, ನರಸಿಂಹಶೆಟ್ಟಿ, ನಿವೃತ್ತ ಯೋಧ ಈಶ್ವರ್, ಎ.ಆರ್. ರವಿಕುಮಾರ್, ಕಿಶೋರ್, ಮಂಜುನಾಥ್, ಪಿ.ಎಚ್.ಇ. ವೆಂಕಟೇಶ್, ಡಿಶ್ ಗೋವಿಂದ, ಸುಧಾನಳಿನಿ, ವನಜಾಕ್ಷಿ, ಮುರಳಿಧರ ಗುಪ್ತಾ, ಎಚ್,ಬಿ, ಈಶ್ವರ್, ಮಿಲ್ ಶಿವಣ್ಣ,ಸ್ಟುಡಿಯೋ ಅಶೋಕ್, ನಾಗರಾಜು, ಲಕ್ಷ್ಮಣ, ಚಂದ್ರು, ಚೆನ್ನೇಗೌಡ, ಪರಸಭೆ ಮುಖ್ಯಾಧಿಕಾರಿ ಶಿವಶಂಕರ್ ಗಣೇಶೋತ್ಸವದ ಯಶಸ್ವಿಗೆ ಸಹಕರಿಸಿದರು.

ರಾಘವೇಂದ್ರ ಮಠದ ಶ್ರೀಶಾಚಾರ್ ಮತ್ತು ತಂಡದವರು ಗಣೇಶೋತ್ಸವ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ಬಾಣಸಿಗ ಸತೀಶ್ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದರು. ಸತ್ಯನ್ ಸೌಂಡ್ಸ್ ಮಾಲೀಕರು ಧ್ವನಿವರ್ಧಕದ ವ್ಯವಸ್ಥೆ ಕಲ್ಪಿಸಿದ್ದರು. ಪುರಸಭೆಯ ಪೌರಕಾಮಿಕರು ಪೆಂಡಾಲ್ ಸ್ವಚ್ಛತೆ ನಡೆಸಿದರು. ಶನಿವಾರ ನಡೆದ ಉತ್ಸವದ ಜೊತೆಯಲ್ಲಿ ಹಾಸನ ಸರ್ಕಲ್ ಇನ್ಸ್ಪೆಕ್ಟರ್ ಮೋಹನ್ ಕೃಷ್ಣ, ನಗರಠಾಣೆ ಎಸ್.ಐ. ಅಭಿಜಿತ್, ಗ್ರಾಮಾಂತರ ಠಾಣೆ ಎಸ್.ಐ. ರಮೇಶ್, ಶಾಂತಿ ಗ್ರಾಮದ ಠಾಣೆಯ ಅರುಣ್ಕುಮಾರ್, ಹಾಸನ ಠಾಣೆ ವಿನಯ್ ಉತ್ಸವದ ಜೊತೆಯಲ್ಲಿ ಸಿಬ್ಬಂದಿ ಜೊತೆಯಲ್ಲಿದ್ದು ಬಂದೋಬಸ್ತ್ ಒದಗಿಸಿದ್ದರು. ಗಣೇಶೋತ್ಸವದಲ್ಲಿ ಡಿ.ಜೆ. ಸೌಂಡ್ ಇಲ್ಲದಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.