ಅರಸೀಕೆರೆ: ಬಾಣಾವಾರ ಪಟ್ಟಣದಲ್ಲಿ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಇತಿಹಾಸವನ್ನು ಸೃಷ್ಟಿಸುತ್ತಿದ್ದು, 60 ರಿಂದ 70 ಜೋಡಿ ಎತ್ತುಗಳು ನೋಂದಣಿಯಾಗಿವೆ ಎಂದು ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆ ಸಂಘಟಕ ಸಮಿತಿ ಅಧ್ಯಕ್ಷ ಧರ್ಮಣ್ಣ ಹೇಳಿದರು.

ಬಾಣಾವಾರ ಜಾವಗಲ್ ರಸ್ತೆಯಲ್ಲಿ ಆಯೋಜಿಸಲಾಗಿರುವ ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆಗೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಸಾನ್ನಿಧ್ಯದಲ್ಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕಳೆದ ವರ್ಷ ರಾಜ್ಯಮಟ್ಟದ ಸ್ಪರ್ಧೆ ಯಶಸ್ವಿಯಾಗಿತ್ತು, ಹಾಗಾಘಿ, ಈ ಬಾರಿ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಶಾಸಕ ಕೆ.ಎಂ.ಶಿವಲಿಂಗೇಗೌಡ , ಜನಪ್ರತಿನಿಧಿಗಳು, ಗ್ರಾಮದ ರೈತರ ಸಹಕಾರ ದೊರಕಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್. ಶ್ರೀಧರ್ , ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ ), ಹಳ್ಳಿಕಾರ್ ಗೋತಳಿ ಪ್ರಭುಗಳ ಸಂಘದ ಮಾಲತೇಶ್, ಶರತ್, ಶಿವು, ಸಮಾಜ ಸೇವಕ ಥ್ರಿಲ್ಲರ್ ಮಂಜು, ದೀಪಕ್ ಹಿರೇಮಠ, ರಾಜು, ಬಾಲಾಜಿ ಶೆಟ್ಟಿ ಅಜಯ್, ಕುಮಾರ್ , ಹಳ್ಳಿಕಾರ್ ಗೋತಳಿ ಪ್ರೇಮಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.