ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದ ಹೆತ್ತೂರು ಬಳಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ– ರಕ್ಷಣೆ

ಹೆತ್ತೂರು ಹೋಬಳಿಯ ಬಾಚ್ಚಿಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ‌.
Published 16 ಜೂನ್ 2023, 7:54 IST
Last Updated 16 ಜೂನ್ 2023, 7:54 IST
ಅಕ್ಷರ ಗಾತ್ರ

ಹೆತ್ತೂರು(ಹಾಸನ): ಹೆತ್ತೂರು ಹೋಬಳಿಯ ಬಾಚ್ಚಿಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ‌.

ಗ್ರಾಮದ ಸುಮಂತ್ ಎಂಬುವವರ ಮನೆ ಸಮೀಪ ಕಾಣಿಸಿಕೊಂಡ ಕಾಳಿಂಗಸರ್ಪವನ್ನು ಕೊಡ್ಲಿಪೇಟೆ ಗ್ರಾಮದ ಉರಗ ಪ್ರೇಮಿ ನೀಸರ್ ಎಂಬುವವರು ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಸತತ ಒಂದು ಗಂಟೆ ಪ್ರಯತ್ನದಿಂದ ಸುಮಾರು 12 ಅಡ್ಡಿ ಉದ್ದ,10 ಕೆ.ಜಿ ತೂಕದ ಹಾವನ್ನು ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ನರಸಿಂಹ ಮೂರ್ತಿ, ಅರಣ್ಯ ರಕ್ಷಕ ಕುಶಾಲ್, ಸಿಬ್ಬಂದಿ ರತನ್, ಉಲ್ಲಾಸ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT