ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೂವು, ಲಾಂಛನದ ಬಗ್ಗೆ ಗೌರವವಿದೆ: ಶಿವಲಿಂಗೇಗೌಡ

Published 28 ಜನವರಿ 2024, 15:48 IST
Last Updated 28 ಜನವರಿ 2024, 15:48 IST
ಅಕ್ಷರ ಗಾತ್ರ

ಅರಸೀಕೆರೆ (ಹಾಸನ ): ‘ಗಣರಾಜೋತ್ಸವ ಸಮಾರಂಭದಲ್ಲಿ ಚಂದ್ರಶೇಖರ ಇಂಟರ್‌ನ್ಯಾಷನಲ್ ಶಾಲೆ ಮಕ್ಕಳು ನಡೆಸಿಕೊಟ್ಟ ನೃತ್ಯದಲ್ಲಿ ರಾಷ್ಟ್ರೀಯ ಹೂವು ಕಮಲವನ್ನು ದೊಡ್ಡದಾಗಿ ಪ್ರದರ್ಶನ ಮಾಡಿದ್ದರು. ಹಾಗಾಗಿ ಸಂಬಂಧಿಸಿದ ಶಿಕ್ಷಕರನ್ನು ಪ್ರಶ್ನಿಸಿದೆ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

ವಿಡಿಯೊ ಹೇಳಿಕೆ ನೀಡಿರುವ ಅವರು, ‘ಮಕ್ಕಳು ರಾಷ್ಟ್ರೀಯ ಚಿಹ್ನೆಗಳಾದ ನವಿಲು, ಅಶೋಕ ಚಕ್ರ, ಕಮಲದ ಹೂವು ಪ್ರದರ್ಶಿಸಿದ್ದರು. ಆದರೆ, ಕಮಲದ ಹೂವು ಎದ್ದುಕಾಣುವಂತೆ ಮಾಡಿದ್ದರು. ಇದಕ್ಕಾಗಿ ಶಿಕ್ಷಕರನ್ನು ನಾನು ಪ್ರಶ್ನಿಸಿದ್ದು ನಿಜ. ಆದರೆ, ಅದರಲ್ಲಿ ರಾಜಕೀಯದ ದುರುದ್ದೇಶದಿಂದ ಕೇಳಿರಲಿಲ್ಲ. ರಾಷ್ಟ್ರಪ್ರೇಮ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಗೌರವವಿದೆ. ಕೀಳುಮಟ್ಟದ ರಾಜಕೀಯ ಮಾಡಿಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ’ ಎಂದು ತಿಳಿಸಿದ್ದಾರೆ.

‘ಆ ನೃತ್ಯಕ್ಕೆ ಬಹುಮಾನ ನೀಡುವುದು ತಾಲ್ಲೂಕು ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ. ಇದರಲ್ಲಿ ನನ್ನ ಪಾತ್ರವಿಲ್ಲ. ಅಧಿಕಾರಿಗಳನ್ನೇ ಕೇಳಲಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT