ಬುಧವಾರ, ಜನವರಿ 19, 2022
24 °C
ಜಿಲ್ಲಾ ಪಂಚಾಯಿತಿ ಮಟ್ಟದಲ್ಲೂ ತಂಡ ರಚನೆ

ವಿಧಾನ ಪರಿಷತ್ ಚುನಾವಣೆ: ಎಚ್.ಎಂ. ವಿಶ್ವನಾಥ್ ಪರ ನಾಳೆಯಿಂದ ಪ್ರಚಾರ; ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಪರವಾಗಿ ನ. 29 ರಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗು ವುದು’ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ಸಾಧನೆಗಳನ್ನು‌ ಮುಂದಿಟ್ಟು ಮತಯಾ ಚನೆ ಮಾಡಲಾಗುವುದು. ಚುನಾವಣೆ ಯಲ್ಲಿ ಗೆಲ್ಲಲೇಬೇಕು ಎಂಬ ಆತ್ಮವಿಶ್ವಾಸ ದಿಂದ ಕೆಲಸ ಮಾಡುತ್ತೇವೆ. ಈಗಾಗಲೇ ವಿಧಾನಸಭಾ ಕ್ಷೇತ್ರದಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಟ್ಟದಲ್ಲೂ ತಂಡಗ ಳನ್ನು ರಚಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಒಟ್ಟು 3,617 ಮತದಾರರಿದ್ದಾರೆ. ಈ ಪೈಕಿ ಬಿಜೆಪಿ ಬೆಂಬಲಿತ 1,270 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು, 34 ಜನ ಪುರಸಭೆ ಹಾಗೂ ನಗರಸಭೆ ಸದಸ್ಯರಿದ್ದಾರೆ. ಪ್ರತಿಯೊಬ್ಬ ಸದಸ್ಯ ರನ್ನು ಸಂಪರ್ಕಿಸಿ ಮತಯಾಚನೆ ಮಾಡಲಾಗುವುದು’ ಎಂದರು.

‘ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ಬೆಂಬಲ ಕೋರಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಎಲ್ಲಿ ಜೆಡಿಎಸ್‍ ಅಭ್ಯರ್ಥಿಗಳಿಲ್ಲ ಅಲ್ಲಿ ಬಿಜೆಪಿಗೆ ಸಹಕಾರ ನೀಡುವಂತೆ ಕೋರಿದ್ದಾರೆ. ಪಕ್ಷದ ಅಭ್ಯರ್ಥಿಗಳಿರುವ ಕಡೆ ನಾವು ಸಹಕಾರ‌ ನೀಡುವುದಿಲ್ಲ.  ಚುನಾವಣೆಯನ್ನು ಚುನಾವಣೆ ರೀತಿ ನಡೆಸುತ್ತೇವೆ’ ಎಂದರು.

‘ಹಾಸನದಲ್ಲಿ ಉದ್ಯಮಿಗಳು ಹೆಚ್ಚಿದ್ದಾರೆ. ನಗರದ ವರ್ತುಲ ರಸ್ತೆಯಲ್ಲಿ ಕಾನೂನು ಬದ್ದವಾಗಿಯೇ ಸಿ.ಎಲ್– 7 ಬಾರ್ ತೆರೆಯಲು ಅವಕಾಶ ನೀಡ ಲಾಗಿದೆ. ಕಾನೂನು ಮೀರಿ ಬಾರ್ ತೆರೆದಿದ್ದರೆ ಅಂತವರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳ ಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪರ್ಸೆಂಟೇಜ್ ಎಂಬುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ‌ ಹುಟ್ಟಿಕೊಂಡಿದೆ. ಇದರಲ್ಲಿ‌ ಬಿಜೆಪಿ ಭಾಗವಹಿಸಿಲ್ಲ. ರಾಜ್ಯದಲ್ಲಿ ತನಿಖಾ ಸಂಸ್ಥೆಗಳು ಸದೃಢವಾಗಿವೆ. ಅಗತ್ಯಬಿದ್ದರೆ ಮಾತ್ರ ಸಿಬಿಐ ತನಿಖೆಗೆ ವಹಿಸಲು ಸಿ.ಎಂ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್‍, ಶಾಸಕ ಪ್ರೀತಂ ಜೆ. ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‍, ಮಾಜಿ ಅಧ್ಯಕ್ಷ ರೇಣುಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು