ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ಸ್ಯಾನಿಟೈಸರ್ ರಾಜಕಾರಣ

Last Updated 9 ಜೂನ್ 2020, 5:06 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಉಚಿತ ಸ್ಯಾಟಿನಟೈಸರ್‌ ಡಿಸ್ಪೆನ್ಸರ್‌ ನೀಡುವ ರಾಜಕಾರಣ ಆರಂಭವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಳವಡಿಸಿದ್ದ ಶಾಸಕ ಪ್ರೀತಂ ಜೆ. ಗೌಡ ಅವರ ಭಾವಚಿತ್ರ ಇರುವ ಸ್ಯಾನಿಟೈಸರ್ ಡಿಸ್ಪೆನ್ಸರ್ ಪಕ್ಕದಲ್ಲಿ ಒಳಚರಂಡಿ ಕೆಲಸಗಾರ ದಯಾನಂದ ಎಂಬವರು ಡಿಸ್ಪೆನ್ಸರ್ ಇರಿಸಿದ್ದಾರೆ. ಇದು ಬಿಜೆಪಿ, ಜೆಡಿಎಸ್‌ ರಾಜಕೀಯದ ಕೆಸರೆರೆಚಾಟಕ್ಕೆ ವೇದಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಇರಿಸಿರುವ ಸ್ಯಾನಿಟೈಸರ್‌ ಡಿಸ್ಪೆನ್ಸರ್‌

ಮೂರನೇ ಹಂತದ ಲಾಕ್ ಡೌನ್ ಆರಂಭವಾದ ವೇಳೆ ಪ್ರೀತಂ ಜೆ.ಗೌಡ ಅವರು ಕೈ ಮುಗಿದ ಭಂಗಿಯಲ್ಲಿರುವ ದೊಡ್ಡ ಭಾವಚಿತ್ರವಿರುವ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಅವರ ಬೆಂಬಲಿಗರು ಇರಿಸಿದ್ದರು. ಕೆಲ ಜೆಡಿಎಸ್ ಮುಖಂಡರು, ಸ್ಯಾನಿಟೈಸರ್ ವಿಷಯದಲ್ಲಿಯೂ ಶಾಸಕ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿ, ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು.

ಕೆಲ ದಿನಗಳ ಬಳಿಕ ಕೈ ಮುಗಿದಿರುವ ಭಂಗಿಯಲ್ಲಿ ನಿಂತಿರುವ ದಯಾನಂದ ಎಂಬವರ ಚಿತ್ರವಿರುವ ಸ್ಯಾನಿಟೈಸರ್ ಡಿಸ್ಪೆನ್ಸರ್ ಇರಿಸಲಾಗಿದೆ. ಮೇಲೆ ಸಾರ್ವಜನಿಕರ ಸೇವೆಗಾಗಿ ಎಂದೂ ಕೆಳಗೆ ದಯಾನಂದ್ ಒಳಚರಂಡಿ ಕೆಲಸಗಾರರು ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.

ಎರಡೂ ಸ್ಯಾನಿಟೈಸರ್ ಡಿಸ್ಪೆನ್ಸರ್ ಅಕ್ಕಪಕ್ಕದಲ್ಲಿರುವ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT