ಆಹಾರ ನೀಡುವ ಶ್ರಾವಕರು ಮನಶುದ್ಧಿ ವಚನಶುದ್ಧಿ ಕಾಯಶುದ್ಧಿ ಆಹಾರಶುದ್ಧಿ ಜಲಶುದ್ಧಿ ಇದ್ದು ನವಧಾ ಭಕ್ತಿಯಿಂದ ಆಹಾರ ನೀಡುವುದಾಗಿ ಹಾಗೂ ತಾವು ಸ್ವೀಕರಿಸಬೇಕು ಎಂದಾಗ ತ್ಯಾಗಿಗಳು ಆಹಾರ ಸ್ವೀಕರಿಸುತ್ತಾರೆ.
– ಜಯಪದ್ಮಮ್ಮ, ಶ್ರಾವಕಿ
ಪಡೆದ ಆಹಾರದಲ್ಲಿ ಕೂದಲು ಇರುವೆ ಹರಳು ಮುಂತಾದ ಅಶುದ್ಧ ವಸ್ತುಗಳು ಕಂಡು ಬಂದರೆ ಆಹಾರ ನಿಲ್ಲಿಸಿ ನೀರನ್ನೂ ತೆಗೆದುಕೊಳ್ಳದೇ ನಿಂತಲ್ಲಿಂದ ಹೊರಡುತ್ತಾರೆ. ಇದನ್ನು ಅಂತರಾಯ ಎಂದು ಕರೆಯುತ್ತಾರೆ.