ಬಸಾಪುರ ಏತ ನೀರಾವರಿ ಯೋಜನೆಯ ವಿವಿಧ ಭಾಗದ ದುರಸ್ತಿ ನಿರ್ವಹಣೆ ಕಾರ್ಯಗಳಿಗಾಗಿ ₹1 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್ ಹಂತದಲ್ಲಿದೆ. ಎಲ್ಲ ಕೆಲಸಗಳು ಪೂರ್ಣಗೊಂಡು ಈ ಮಳೆಗಾಲಕ್ಕೆ ಯೋಜನೆ ಸೇವೆಗೆ ಸಿದ್ಧಗೊಳ್ಳಲಿದೆ– ದೇವರಾಜ ಯುಟಿಪಿ ಎಂಜಿನಿಯರ್
ಏತ ನೀರಾವರಿ ಯೋಜನೆ ಆರಂಭಗೊಂಡ ದಿನಗಳಿಂದಲೂ ಹಣ ಖರ್ಚು ಮಾಡುವುದೇ ಆಗಿದೆ. ಆದರೆ ಯೋಜನೆ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುವಲ್ಲಿ ವ್ಯವಸ್ಥಾಪಕರ ನೇಮಕ ನಿಗದಿತ ಅವಧಿಯಲ್ಲಿ ನಿರ್ವಹಣಾ ಕೆಲಸಗಳು ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ವ್ಯವಸ್ಥೆಯಾಗಬೇಕು.– ನಿಜಲಿಂಗಪ್ಪ ಮುದಿಯಪ್ಪನವರ ಸೋಮಾಪೂರ ಗ್ರಾಮದ ರೈತ
ನದಿ ಮೂಲಕ ನೀರು ತುಂಬಸಲು ಸಾಧ್ಯವಾಗದ ಕಾರಣಕ್ಕಾಗಿ ಕೆರೆಗಳು ಖಾಲಿಯಾಗಿವೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಇಲ್ಲದಿದ್ದರೆ ಜಾನುವಾರುಗಳಿಗೆ ತೊಂದರೆ ತಪ್ಪಿದ್ದಲ್ಲ. ಇಲ್ಲಿನ ಕೃಷಿ ಭೂಮಿಯೂ ಈ ಬಾರಿ ನದಿ ನೀರಿನಿಂದ ವಂಚಿತವಾಗಿದೆ.– ಚನ್ನವೀರಪ್ಪ ಕೋಡಿಹಳ್ಳಿ ಬಸಾಪುರ ಗ್ರಾಮದ ರೈತ
ಬಸಾಪುರ ಏತ ನೀರಾವರಿ ಯೋಜನೆಯ ಸುಮಾರು 20 ಕಿ.ಮೀ ಕಾಲುವೆಯನ್ನು ನಿಗದಿತವಾಗಿ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ನೀರು ಕಾಲುವೆಯ ಕೊನೆಯ ತನಕ ತಲುಪುತ್ತದೆ. ಮುಳಥಳ್ಳಿ ಗ್ರಾಮಕ್ಕೆ ಯೋಜನೆಯ ನೀರು ತಲುಪುತ್ತಿಲ್ಲ. ಇದಕ್ಕೆ ಕಾಲುವೆ ಅವೈಜ್ಞಾನಿಕ ನಿರ್ಮಾಣವೇ ಕಾರಣ.– ವೀರೇಶ ಬಾಳಂಬೀಡ ಮುಳಥಳ್ಳಿ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.