ಭಾನುವಾರ, ಮೇ 29, 2022
30 °C

ಹಾವೇರಿ: ನೆರೆ ವೀಕ್ಷಣೆಗೆ ಐಎಂಸಿ ಕೇಂದ್ರ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಐಎಂಸಿ ಕೇಂದ್ರ ತಂಡವು ಜಿಲ್ಲೆಯಲ್ಲಿ ಶನಿವಾರ ಪ್ರವಾಸ ಕೈಗೊಂಡು 2021-22ನೇ ಸಾಲಿನ ನವೆಂಬರ್‌ ತಿಂಗಳಲ್ಲಿ ಸತತ ಮಳೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ತಂಡವು ಬೆಳಿಗ್ಗೆ 9.40ರಿಂದ ಶಿಗ್ಗಾವಿ ತಾಲ್ಲೂಕಿನ ಕುನ್ನೂರು, ದುಂಡಸಿ, ಅರಟಾಳ, ಹೊಸೂರು ಗ್ರಾಮಗಳ ಪ್ರದೇಶಕ್ಕೆ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಆಲಿಸಿತು.

ನಂತರ ಬೆಳಿಗ್ಗೆ 10.30ಕ್ಕೆ ಶಿಗ್ಗಾವಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಪವರ್‌ ಪಾಯಿಂಟ್ ಪ್ರಸೆಂಟೇಶನ್‌ ವೀಕ್ಷಣೆ ಮಾಡಿತು.

ಮಧ್ಯಾಹ್ನ 12.30ಕ್ಕೆ ಸವಣೂರು ತಾಲ್ಲೂಕಿನ ಹೊಸಮನ್ನಂಗಿ, ಹಳೇಮನ್ನಂಗಿ ಪ್ರದೇಶಗಳಿಗೆ ಭೇಟಿ ನೀಡಲಿದೆ. 

ಮಧ್ಯಾಹ್ನ 1.45ಕ್ಕೆ ಹಾವೇರಿಗೆ ಆಗಮಿಸುವರು. ಮಧ್ಯಾಹ್ನ 3.45ಕ್ಕೆ ಹಿರೇಕೆರೂರು ತಾಲ್ಲೂಕಿನ ಚನ್ನಹಳ್ಳಿ, ದಂಡಿಗಿಹಳ್ಳಿ ಹಾಗೂ ರಾಣೆಬೆನ್ನೂರು ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು