ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ: ವೇದ, ಸಂಸ್ಕೃತಿ ಎತ್ತಿಹಿಡಿದ ಮಹಾಗುರು

ಶಂಕರಾಚಾರ್ಯರ ಜಯಂತಿಯಲ್ಲಿ ಗಿರೀಶ ನಾಡಗೇರ ಅಭಿಮತ
Published 12 ಮೇ 2024, 14:14 IST
Last Updated 12 ಮೇ 2024, 14:14 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ‘ಭಾರತೀಯರಲ್ಲಿ ನಾಸ್ತಿಕತೆ ತುಂಬಿದ್ದ ಸಂದರ್ಭದಲ್ಲಿ ಆದಿಗುರು ಶಂಕರಾಚಾರ್ಯರು ಜನ್ಮತಾಳಿ ವೇದ, ಉಪನಿಷತ್ತು, ಭಾರತೀಯ ಸಂಸ್ಕೃತಿ, ಸನಾತನವನ್ನು ಎತ್ತಿ ಹಿಡಿದರು’ ಎಂದು ರಟ್ಟೀಹಳ್ಳಿ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಿರೀಶ ನಾಡಗೇರ ಹೇಳಿದರು.

ಅವರು ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಭಾನುವಾರ ಆಯೋಜಿಸಲಾಗಿದ್ದ ಶಂಕರಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಚಕ ವಾದಿರಾಜ ಕಟ್ಟಿ ಮಾತನಾಡಿ, ‘ಶಂಕರಾಚಾರ್ಯರು ತಮ್ಮ ಎಂಟನೇ ವರ್ಷದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಸನಾತನ ಹಿಂದೂ ಸಂಸ್ಕೃತಿಯನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೇದ, ಉಪನಿಷತ್ತು, ವೇದಮಂತ್ರಗಳು, ದೇವರು ಸತ್ಯ ಎನ್ನುವುದನ್ನು ಜನರಲ್ಲಿ ಬಿಂಬಿಸಿದರು. ತಮ್ಮ ಜೀವನವನ್ನು ಧರ್ಮರಕ್ಷಣೆಗಾಗಿ ಮೀಸಲಿಟ್ಟ ಅವತಾರ ಪುರುಷ’ ಎಂದರು.

ಉಪತಹಶೀಲ್ದಾರ್ ಎಂ.ಎಸ್. ಜಗತಾಪ, ಸಿಬ್ಬಂದಿ ರಾಜು ಪೂಜಾರ, ಶಿವನಾಗಪ್ಪ ಜೋಗೇರ, ಗಣೇಶ ಬೊಂಗಾಳೆ ಸಮಾಜದ ಮುಖಂಡರಾದ ಗಿರೀಶ ನಾಡಗೇರ, ವಾದಿರಾಜ ಕಟ್ಟಿ, ರವೀಂದ್ರ ಮಕರಿ, ಉಷಾ ಮಕರಿ, ಗುರುರಾಜ ಕಟ್ಟಿ, ಗಿರಿಜಾ ನಾಡಗೇರ, ಲಕ್ಷ್ಮೀ ಆದ್ವಾನಿ, ನರಸಿಂಹ ಆದ್ವಾನಿ, ವಾಸು ಜೋಶಿ, ಸುಬ್ರಹ್ಮಣ್ಯ ನಾಡಗೇರ, ಕೃಷ್ಣರಾಜ ವೇರ್ಣೇಕರ, ಪ್ರದೀಪ ಕುಲಕರ್ಣಿ ಇದ್ದರು.

ಶಂಕರಾಚಾರ್ಯ ಉತ್ಸವ: ‘ರಟ್ಟೀಹಳ್ಳಿ ಪಟ್ಟಣದಲ್ಲಿ ಕದಂಬೇಶ್ವರ ದೇವಸ್ಥಾನದಲ್ಲಿ ಆದಿಗುರು ಶಂಕರಾಚಾರ್ಯ ಉತ್ಸವವು ಭಾನುವಾರದಿಂದ ಪ್ರಾರಂಭಗೊಂಡಿತು. ಮೇ 18ರ ವರೆಗೆ ಉತ್ಸವ ನಡೆಯಲಿದ್ದು, ನಿತ್ಯ ಬೆಳಿಗ್ಗೆ 10 ಗಂಟೆಗೆ ಕದಂಬೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಗುರುಗಳಿಗೆ ಅಷ್ಟೋತ್ತರ ಸೇವೆ, ಸಂಜೆ ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನೆರವೇರಲಿದೆ. ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಗಿರೀಶ ನಾಡಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT