ಹಾವೇರಿ: ನಗರದ ಹತ್ತಿ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆ ಮೂಲಕ ₹ 1.74 ಕೋಟಿ ಅಕ್ರಮ ವಹಿವಾಟು ನಡೆದಿರುವ ಬಗ್ಗೆ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯ ಪೊಲೀಸರು ಹಾವೇರಿಯಲ್ಲಿರುವ ವ್ಯಾಪಾರಿಯ ಖಾತೆ ನಿಷ್ಕ್ರಿಯಗೊಳಿಸಿ ನೋಟಿಸ್ ನೀಡಿದ್ದಾರೆ.

ನೋಟಿಸ್ನಿಂದ ಆತಂಕಗೊಂಡಿರುವ ಮಹಿಳಾ ವ್ಯಾಪಾರಿ, ‘ನನ್ನ ಖಾತೆಯ ಮಾಹಿತಿ ದುರ್ಬಳಕೆ ಮಾಡಿಕೊಂಡಿರುವ ಸೈಬರ್ ವಂಚಕರು, ಅಕ್ರಮ ವಹಿವಾಟು ನಡೆಸಿ ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಆರೋಪಿಸಿ ಹಾವೇರಿಯ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಗೆ ದೂರು ನೀಡಿದ್ದಾರೆ.

ಮಹಿಳಾ ವ್ಯಾಪಾರಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಸಾಲಕ್ಕಾಗಿ ಆ್ಯಪ್ ಇನ್ಸ್ಟಾಲ್: ‘ನಗರದ ನಿವಾಸಿಯಾಗಿರುವ ಮಹಿಳಾ ವ್ಯಾಪಾರಿ, ಹಲವು ವರ್ಷಗಳಿಂದ ಹತ್ತಿ ವ್ಯಾಪಾರ ಮಾಡುತ್ತಿದ್ದಾರೆ. ಅವರ ಪತಿ, ಅಂಗವಿಕಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಸಾಲಕ್ಕಾಗಿ ಹಲವರ ಬಳಿ ವಿಚಾರಿಸಿದ್ದರು. ಆದರೆ, ಅಗತ್ಯದಷ್ಟು ಸಾಲ ಸಿಕ್ಕಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆಯಲು ತೀರ್ಮಾನಿಸಿದ್ದ ಮಹಿಳೆ, ‘ಲೆಗೆಸ್ಸಿ ಲೋನ್’ ಕಂಪನಿ ಬಗ್ಗೆ ವಿಚಾರಿಸಿದ್ದರು. ಕಂಪನಿಯ ಪ್ರತಿನಿಧಿಗಳು ಎನ್ನಲಾದ ನೇಹಾ ಹಾಗೂ ಅಮಿತ್ ಎಂಬುವವರು, ಮಹಿಳೆಯ ಜೊತೆ ಮಾತನಾಡಿ ಕಂಪನಿ ಬಗ್ಗೆ ತಿಳಿಸಿದ್ದರು. ಎಕ್ಸಿಸ್ ಬ್ಯಾಂಕ್ನಲ್ಲಿ ಚಾಲ್ತಿ ಖಾತೆ ತೆರೆಯುವಂತೆ ಹೇಳಿದ್ದರು. ಅವರ ಮಾತು ನಂಬಿದ್ದ ಮಹಿಳೆ, ಚಾಲ್ತಿ ಖಾತೆ ತೆರೆದಿದ್ದರು. ನಂತರ, ಮೊಬೈಲ್ನಲ್ಲಿ ‘ಪುಶ್ಬುಲೆಟ್’ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದರು. ಅದರಲ್ಲಿ ವೈಯಕ್ತಿಕ ಮಾಹಿತಿ ನಮೂದಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಮಹಿಳಾ ವ್ಯಾಪಾರಿಯ ಮೊಬೈಲ್ ನಿರ್ವಹಣೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಆರೋಪಿಗಳು, ಅಕ್ಟೋಬರ್ 21ರಿಂದ ಅ. 26ರವರೆಗೆ ಅಕ್ರಮವಾಗಿ ₹ 1.74 ಕೋಟಿ ವಹಿವಾಟು ನಡೆಸಿದ್ದರು. ವಹಿವಾಟಿನ ಬಗ್ಗೆ ಮಹಿಳೆಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ’ ಎಂದು ಹೇಳಿವೆ.
ತೆಲಂಗಾಣದಲ್ಲಿ ಪ್ರಕರಣ: ‘ದೇಶದ ವಿವಿಧೆಡೆ ಸೈಬರ್ ವಂಚನೆ ಮಾಡಿದ್ದ ಆರೋಪಿ, ಆ ಹಣವನ್ನು ಹಾವೇರಿಯ ಮಹಿಳಾ ವ್ಯಾಪಾರಿ ಖಾತೆ ಮೂಲಕ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿಗಳು ಎಸಗಿದ್ದ ಕೃತ್ಯದ ಬಗ್ಗೆ ತೆಲಂಗಾಣದಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ಮಾಹಿತಿ ಕಲೆಹಾಕಿದ್ದ ಅಲ್ಲಿಯ ಪೊಲೀಸರು, ಪ್ರಾಥಮಿಕ ಖಾತೆದಾರರಾದ ಮಹಿಳೆಯ ಖಾತೆಯನ್ನು ನಿಷ್ಕ್ರಿಯಗೊಳಿಸಿ ನೋಟಿಸ್ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆಯ ಹಿನ್ನೆಲೆಯಲ್ಲಿ ತಿಳಿದುಕೊಳ್ಳಲಾಗಿದೆ. ಆದರೆ, ಅವರು ಯಾವುದೇ ಅಕ್ರಮದಲ್ಲಿ ತೊಡಗಿಲ್ಲವೆಂಬುದು ಪ್ರಾಥಮಿಕವಾಗಿ ಗೊತ್ತಾಗಿದೆ. ತೆಲಂಗಾಣ ಪೊಲೀಸರು ಸಹ ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಸಾಲ ಪಡೆಯಲು ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ವೈಯಕ್ತಿಕ ಮಾಹಿತಿ ನೀಡಿದ್ದರಿಂದ ಮಹಿಳಾ ವ್ಯಾಪಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.