ಶಿಗ್ಗಾವಿ: ಇಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶನಿವಾರ (ನ. 22) ನಡೆದ 6 ವಿಭಾಗಗಳ ಪರೀಕ್ಷೆ ಫಲಿತಾಂಶವನ್ನು, ಪರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಪ್ರಕಟಿಸಲಾಗಿದೆ.

ವಿಶ್ವವಿದ್ಯಾಲಯದ 2ನೇ ಸೆಮಿಸ್ಟರ್ನ ಆರು ವಿಷಯಗಳು ಹಾಗೂ 4ನೇ ಸೆಮಿಸ್ಟರ್ನ ಒಂದು ವಿಷಯದ ಪರೀಕ್ಷೆಗೆ 320 ವಿದ್ಯಾರ್ಥಿಗಳು ಹಾಜರಾಗಿದ್ದರು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ 5ರವರೆಗೆ ಎರಡು ಅವಧಿಯಲ್ಲಿ ಪರೀಕ್ಷೆಗಳು ನಡೆದಿದ್ದವು.

ಪರೀಕ್ಷೆ ಮುಗಿದ ಮೂರೇ ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿರುವುದು ನಮ್ಮ ವಿಶ್ವವಿದ್ಯಾಲಯವೇ ಮೊದಲು. ಇದರಲ್ಲಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ಶ್ರಮವಿದೆ.
ಪ್ರೊ. ಟಿ.ಎಂ. ಭಾಸ್ಕರ್, ಕುಲಪತಿ, ಜಾನಪದ ವಿಶ್ವವಿದ್ಯಾಲಯ

‘ಮೌಲ್ಯಮಾಪನ ತ್ವರಿತವಾಗಿ ನಡೆದಿದ್ದು, ಅಂಕಗಳನ್ನು ಯುಯುಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸಿ ಫಲಿತಾಂಶ ಪ್ರಕಟಿಸಲಾಗಿದೆ’ ಎಂದು ಕುಲಸಚಿವ ಶಿವಶಂಕರ್ ಕೆ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.