ಮಂಗಳವಾರ, ಮೇ 24, 2022
31 °C
ಜನಸ್ವರಾಜ್‌ ಕಾರ್ಯಕ್ರಮ

ಜೋಡೆತ್ತುಗಳಾದ ಸಿದ್ದರಾಮಯ್ಯ– ಡಿಕೆಶಿ ಕಳ್ಳೆತ್ತುಗಳಾಗಿದ್ದಾರೆ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಉಪಚುನಾವಣೆಯಲ್ಲಿ ಹಾನಗಲ್‌ ಒಂದು ಕ್ಷೇತ್ರವನ್ನು ಗೆದ್ದಿದ್ದಕ್ಕೆ ಕಾಂಗ್ರೆಸ್ ನಾಯಕರು ಹಾರಾಡುತ್ತಾ ಜಿಗಿದಾಡುತ್ತಿದ್ದಾರೆ. ಈ ಗೆಲುವು ಹುಚ್ಚರ ಕೈಯಲ್ಲಿ ಕಲ್ಲು ಕೊಟ್ಟಂತಾಗಿದೆ. ನಾವು ಕೂಡ ಸಿಂಧಗಿ ಕ್ಷೇತ್ರವನ್ನು ಗೆದ್ದಿದ್ದೇವೆ ಎಂಬುದನ್ನು ಮರೆತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.   

ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜನಸ್ವರಾಜ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಮಾತ್ರ ನಾವು ಕಳೆದುಕೊಂಡಿದ್ದೇವೆ. ಜನರು ಮನಸು ಮಾಡಿದರೆ 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಮತ್ತೆ ಕೇಸರಿ ಬಾವುಟ ಹಾರುತ್ತದೆ ಎಂದರು.

ಕಾಂಗ್ರೆಸ್‌ ಜೋಡೆತ್ತುಗಳಲ್ಲಿ (ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌) ಅಧಿಕಾರಕ್ಕಾಗಿ ಒಳಗೊಳಗೆ ಕಿತ್ತಾಟ ನಡೆಯುತ್ತಿದೆ. ಆ ಜೋಡೆತ್ತು ಕಳ್ಳೆತ್ತುಗಳಾಗಿವೆ. ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ, ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ ಬಡವಾಗಲಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ... ಅಪ್ಪನ ನೆರಳಿನಲ್ಲಿ ಬದುಕಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಟೀಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು