ಹಾನಗಲ್: ಜಿಟಿಜಿಟಿ ಮಳೆಗೆ ಪಟ್ಟಣದ ರಸ್ತೆ, ಚರಂಡಿಗಳ ಸ್ಥಿತಿ ಅಧ್ವಾನವಾಗಿದೆ. ಪುರಸಭೆ ಚುನಾವಣೆ ಸಮೀಪದಲ್ಲಿವೆ. ನಮ್ಮ ವಾರ್ಡ್ ಜನರಿಗೆ ಉತ್ತರಿಸುವ ಕಾರಣಕ್ಕಾದರೂ, ರಸ್ತೆ ದುರಸ್ತಿ ಮತ್ತು ಕುಡಿಯುವ ನೀರು, ವಿದ್ಯುತ್ ದೀಪ ಸಮಸ್ಯೆಗಳನ್ನು ಸರಿಪಡಿಸಿ ಎಂದು ಸೋಮವಾರ ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಒತ್ತಾಯಿಸಿದರು.

ನಮ್ಮ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿನ ಕುಂದು ಕೊರತೆಗಳನ್ನು ಗಮನಕ್ಕೆ ತಂದರೂ, ಕೆಲಸವಾಗುತ್ತಿಲ್ಲ. ಅನಗತ್ಯ ಕೆಲಸಗಳಿಗೆ ಪುರಸಭೆಯ ಹಣ ವಿನಿಯೋಗವಾಗುತ್ತಿದೆ. ಈಗಿರುವ ಅಲ್ಪ ಅವಧಿಯಲ್ಲಾದರೂ, ಜನರು ಹೇಳಿದ ಕೆಲಸಗಳಾಗಬೇಕು ಎಂದು ಹಲವು ಸದಸ್ಯರು ಸಭೆಯಲ್ಲಿ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಅವರನ್ನು ಒತ್ತಾಯಿಸಿದರು.

ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಮೇಲೆ ಹರಿಹಾಯ್ದ ಸದಸ್ಯೆ ಶೋಭಾ ಉಗ್ರಣ್ಣನವರ, ಕಲ್ಲಹಕ್ಕಲ ಹಾಗೂ ಕಮಾಟಗೇರಿ ಬಡಾವಣೆಯ ರಸ್ತೆ ಹಾಳಾಗಿದೆ. ಗಟಾರದಲ್ಲಿನ ನೀರು ಹರಿಯದೇ ಬಡಾವಣೆ ಕಲುಷಿತಗೊಳ್ಳುತ್ತಿದೆ. ಸ್ಥಳೀಯರು ಪುರಸಭೆಗೆ ಶಾಪ ಹಾಕುತ್ತಿದ್ದಾರೆ. 2–3ವರ್ಷಗಳಿಂದ ದುಂಬಾಲು ಬಿದ್ದರೂ, ಕಾಮಗಾರಿಗೆ ಪುರಸಭೆ ನಿರ್ಲಕ್ಷ ತೋರಿದೆ ಎಂದರು.

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸೇರಿದಂತೆ ಹಲವೆಡೆ ಅನಗತ್ಯವಾಗಿ ಅಲಂಕಾರಕ್ಕಾಗಿ ₹83,692 ಖರ್ಚು ಹಾಕಿರುವಿರಿ. ಮೂಲ ಸೌಕರ್ಯಗಳತ್ತ ಗಮನ ಹರಿಸುವುದು ಬಿಟ್ಟು ಅನಗತ್ಯ ಖರ್ಚು ಮಾಡಬೇಕಾಗಿತ್ತೇ? ಇದು ಸಾರ್ವಜನಿಕರ ತೆರಿಗೆ ಹಣ. ಸಾರ್ವಜನಿಕರೇ ಇದನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು.

ಪುರಸಭೆ ಸದಸ್ಯ ಜಮೀರ ಶೇಖ್ ಮಾತನಾಡಿ, ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಇಷ್ಟರಲ್ಲೇ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿದರೆ ಸಾಲದು, ಈ ಕೂಡಲೇ ಅಗತ್ಯ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕು ಎಂದರು.

ಪುರಸಭೆಗೆ ಸ್ವಂತ ಜೆಸಿಬಿ ಇದ್ದರೂ ಕೂಡ ಬಾಡಿಗೆ ಜೆಸಿಬಿ ಬಳಸಿ ಖರ್ಚು ಹಾಕಿದ್ದೀರಿ. ಇದು ಹಣದ ಅಪವ್ಯಯವಲ್ಲವೆ ಎಂದು ಸದಸ್ಯ ನಾಗಪ್ಪ ಸವದತ್ತಿ ಪ್ರಶ್ನಿಸಿದರು. ಪುರಸಭೆಯ ಜೆಸಿಬಿ ದುರಸ್ತಿ ಸ್ಥಿತಿಯಲ್ಲಿದೆ ಎಂದು ಮುಖ್ಯಾಧಿಕಾರಿ ಜಗದೀಶ ವೈ.ಕೆ ಹೇಳಿದರು.

ಸದಸ್ಯೆ ಹಸೀನಾಬಾನು ನಾಯ್ಕನವರ ಮಾತನಾಡಿ, ಪಟ್ಟಣದ ರಸ್ತೆಗಳ ಗುಂಡಿ ಮುಚ್ಚಲೂ ಪುರಸಭೆಯಲ್ಲಿ ಹಣವಿಲ್ಲವೆ? ಸಾರ್ವಜನಿಕರಿಗೆ ಇದರಿಂದಾಗುವ ಆತಂಕ ತೊಂದರೆ ಬಗ್ಗೆ ಒಂದಷ್ಟೂ ಕಾಳಜಿ ಪುರಸಭೆಗೆ ಇಲ್ಲದಾಗಿದೆ. ನಿತ್ಯ ಸಮಸ್ಯೆಗಳಿಗೂ ಸ್ಪಂದಿಸದ ಪುರಸಭೆ ಇದೆಯೋ ಇಲ್ಲವೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದರು.

ಸದಸ್ಯರಾದ ಮಮತಾ ಆರೆಗೊಪ್ಪ ಹಾಗೂ ವಿರುಪಾಕ್ಷಪ್ಪ ಕಡಬಗೇರಿ ಇದಕ್ಕೆ ಧ್ವನಿಗೂಡಿಸಿದರು.

ಅಧ್ಯಕ್ಷರ ವಿರುದ್ಧ ಹರಿಹಾಯ್ದ ಸದಸ್ಯರು ರಸ್ತೆ ದುರಸ್ತಿಗೆ ಒಕ್ಕೊರಲಿನ ಆಗ್ರಹ | ಮಳೆಯಿಂದ ಹಾಳಾದ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.