ಸಮುದಾಯ ಭವನ ಬಳಕೆಗೆ ಸದ್ಯದಲ್ಲಿಯೇ ದರ ನಿಗದಿಪಡಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲಾಗುವುದು
ಮಹೆಬೂಬಸಾಬ ನದಾಫ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು
‘ಅವೈಜ್ಞಾನಿಕವಾಗಿ ನಿರ್ಮಾಣ’
‘ಅಂಬೇಡ್ಕರ್ ಭವನದಲ್ಲಿ ವೇದಿಕೆಯು ಪೂರ್ವಾಭಿಮುಖವಾಗಿ ಇರುವ ಬದಲು, ಪಶ್ಚಿಮಾಭಿಮುಖವಾಗಿ ಇರುವ ಕಾರಣ ಇಲ್ಲಿ ಮದುವೆಯಂತಹ ಶುಭ ಸಮಾರಂಭ ಆಯೋಜಿಸಲು ಯಾರೂ ಮುಂದೆ ಬರುತ್ತಿಲ್ಲ. ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಬೇಕಿತ್ತು. ಭವನದ ಸೂಕ್ತ ನಿರ್ವಹಣೆಗಾಗಿ ಒಂದು ಸಮಿತಿ ರಚನೆ ಮಾಡಿದಲ್ಲಿ ಕಟ್ಟಡವನ್ನು ಸುರಕ್ಷಿತ ಹಾಗೂ ಸ್ವಚ್ಛತೆಯಿಂದ ಇಡಲು ಸಾಧ್ಯ’ ಎನ್ನುತ್ತಾರೆ ದಲಿತ ಮುಖಂಡ ಸಿದ್ದಪ್ಪ ಹರಿಜನ.
ಸಮಾಜ ಕಲ್ಯಾಣ ಇಲಾಖೆಯ ಅಧೀನಕೊಳಪಟ್ಟ ರಟ್ಟೀಹಳ್ಳಿ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣೆಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಗೆ ತಿಳಿಸಲಾಗಿತ್ತು. ಅವರು ಒಪ್ಪದ ಕಾರಣ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈಗ ಒಂದು ಸಮಿತಿ ರಚನೆ ಮಾಡಲಾಗಿದೆ’ ಎಂದು ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೆಬೂಬಸಾಬ ನದಾಫ್ ತಿಳಿಸಿದರು.