ಹಾವೇರಿ:ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ, ವಿದ್ಯುತ್ ಸಂಪರ್ಕದ ಅಡಚಣೆ ಮತ್ತು ಭೌಗೋಳಿಕ ವಿನ್ಯಾಸದ ತೊಡಕುಗಳಿಂದ ನಿರೀಕ್ಷಿತ ಮಟ್ಟದಲ್ಲಿ ನೀರಿನ ಸಮರ್ಪಕ ವಿತರಣೆ ಸಾಧ್ಯವಾಗುತ್ತಿಲ್ಲ.

ಮುಖ್ಯ ಕಾಲುವೆಗೆ ಹೊಂದಿಕೊಂಡಿರುವ ಉಪಕಾಲುವೆಗಳು ಕೆಲವು ಕಡೆ ದುರಸ್ತಿಯಾಗಿಲ್ಲ. ಮುಳ್ಳುಕಂಟಿ ಮತ್ತು ಹೂಳುಗಳಿಂದ ತುಂಬಿರುವ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನು ಕೆಲವು ಕಡೆ ಉಪಕಾಲುವೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಆಸಕ್ತಿಯನ್ನೇ ತೋರುತ್ತಿಲ್ಲ.

ಈ ಎಲ್ಲ ಕಾರಣಗಳಿಂದಕಾಲುವೆಯ ಕೊನೇ ಅಂಚಿನ ರೈತರು ನೀರಿಗಾಗಿ ‘ಚಾತಕ ಪಕ್ಷಿ’ಯಂತೆ ಕಾಯುತ್ತಿದ್ದಾರೆ. ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

14 ನೀರಾವರಿ ಯೋಜನೆಗಳು

ಹಾನಗಲ್‌ತಾಲ್ಲೂಕಿನಲ್ಲಿವರದಾ ಮತ್ತು ಧರ್ಮಾ ನದಿಗಳ ನೀರು ಬಳಸಿಕೊಂಡು ತಾಲ್ಲೂಕಿನಲ್ಲಿ 14 ಏತ ನೀರಾವರಿ ಯೋಜನೆಗಳಿವೆ. ಈ ಪೈಕಿ 7 ಯೋಜನೆಗಳು ನಿರ್ಮಾಣ ಹಂತದಲ್ಲಿವೆ.

ಶೇಷಗಿರಿ, ಕೂಸನೂರ, ವಾಸನ, ಮಕರವಳ್ಳಿ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡು ಚಾಲನೆಯಲ್ಲಿವೆ. ಇದೇ ಇಲಾಖೆಯಿಂದ ಚಿಕ್ಕಹುಲ್ಲಾಳ, ಬ್ಯಾತನಾಳ, ಹೊಂಕಣ, ಕನ್ನೇಶ್ವರ ಮತ್ತು ಲಕ್ಷ್ಮೀಪುರ ಏತ ನೀರಾವರಿ ಯೋಜನೆಗಳು ನಿರ್ಮಾಣ ಹಂತದಲ್ಲಿವೆ.

ತುಂಗಾ ಮೇಲ್ಡಂಡೆ ಯೋಜನೆ (ಯುಟಿಪಿ) ವ್ಯಾಪ್ತಿಯಲ್ಲಿ ತಿಳವಳ್ಳಿ, ಬಸಾಪೂರ, ಅಚಗೇರಿ ಯೋಜನೆಗಳು ಸ್ಥಾಪನೆಗೊಂಡಿವೆ. ನಿರ್ಮಾಣ ಹಂತದ ಲಕ್ಷ್ಮೀಪುರ ಮತ್ತು ಅಚಗೇರಿ ಯೋಜನೆಗಳು ಧರ್ಮಾ ನದಿಗೆ ನಿರ್ಮಿಸಲಾಗಿದೆ.

ಶಾಸಕ ಸಿ.ಎಂ.ಉದಾಸಿ ಅವರು ಎರಡು ವರ್ಷಗಳ ಹಿಂದೆ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆ ನಿರ್ಮಾಣಕ್ಕೆ ₹ 503 ಕೋಟಿ ಬಿಡುಗಡೆಗೊಳಿಸಿದ್ದರು. ಈ ಕಾಮಗಾರಿಗಳು ಈಗ ಬಹುತೇಕ ಮುಕ್ತಾಯ ಹಂತ ತಲುಪಿವೆ. ಒಟ್ಟು 279 ಕೆರೆಗಳನ್ನು ತುಂಬಿಸುವ ಈ ಬೃಹತ್ ಯೋಜನೆ ವ್ಯವಸ್ಥಿತವಾಗಿ ನಡೆಯುತ್ತಿದೆ. 24 ತಿಂಗಳ ಅವಧಿಯ ಈ ಯೋಜನೆ ಆರಂಭಗೊಂಡು ಈಗ 17 ತಿಂಗಳಾಗಿವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳಿವೆ.

ಬಮ್ಮನಹಳ್ಳಿ, ಬೆಳಗಾಲಪೇಟೆ ಭಾಗದ 182 ಕೆರೆಗಳನ್ನು ವರದಾ ನದಿಯಿಂದ ತುಂಬಿಸುವ ‘ಬಾಳಂಬೀಡ ಏತ ನೀರಾವರಿ ಯೋಜನೆ’ಗೆ ₹ 368 ಕೋಟಿ ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಜಾಕ್‌ವೆಲ್ ನಿರ್ಮಾಣ ಮುಕ್ತಾಯ ಹಂತ ತಲುಪಿದೆ. ಶೇ 80ರಷ್ಟು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ ಎಂದು ಯೋಜನೆಯ ಎಂಜಿನಿಯರ್ ಪ್ರಹ್ಲಾದ ಶೆಟ್ಟಿ ತಿಳಿಸಿದ್ದಾರೆ.

ಇದೇ ರೀತಿ ಹಿರೇಕಾಂಶಿ ಕಾಮಗಾರಿ ಪ್ರಗತಿಯಲ್ಲಿದೆ. ಗೊಂದಿ ಸಮೀಪ ಈ ಯೋಜನೆಯ ಜಾಕ್‌ವೆಲ್ ತಲೆ ಎತ್ತಿದೆ. 77 ಕೆರೆಗಳ ಒಡಲಿಗೆ ವರದಾ ನದಿ ನೀರು ಹರಿಸುವ ಈ ಯೋಜನೆಯ ಮೊತ್ತ ₹ 117.5 ಕೋಟಿ.

88 ಕೆರೆಗಳಿಗೆ ನೀರು

ಹಿರೇಕೆರೂರ: ಕರ್ನಾಟಕ ನೀರಾವರಿ ನಿಗಮದಿಂದ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ₹ 185 ಕೋಟಿ ವೆಚ್ಚದ ‘ಸರ್ವಜ್ಞ ಏತ ನೀರಾವರಿ ಯೋಜನೆ’ಗೆ ಎರಡು ತಿಂಗಳ ಹಿಂದೆ ಚಾಲನೆ ನೀಡಲಾಗಿದೆ.

ಉಕ್ಕಡಗಾತ್ರಿ ಕ್ರಾಸ್ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ 45 ಗ್ರಾಮಗಳ 88 ಕೆರೆಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.

‘ಎರಡೂ ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಈ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಈ ಗ್ರಾಮಗಳಲ್ಲಿ ಬರಗಾಲ ಇಲ್ಲದಂತಾಗಿ ರೈತರ ಬದುಕು ಸುಧಾರಿಸಲಿದೆ’ ಎಂದು ರೈತ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ತಿಳಿಸಿದರು.

3 ಕೆರೆಗಳ ನಿರ್ಮಾಣ

ಸವಣೂರ: ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣ, ಹಳ್ಳ ಮತ್ತು ಕೆರೆ ಹೂಳೆತ್ತುವುದು ಸೇರಿದಂತೆ ತಾಲ್ಲೂಕಿನಲ್ಲಿ 3 ಕೆರೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರದ ಅನುದಾನದಲ್ಲಿ ಸವಣೂರ ಏತ ನೀರಾವರಿ ಕಾಮಗಾರಿಯನ್ನು ಪ್ರಾರಂಭಿಸಿ, ಸುಮಾರು ಹಳ್ಳಿಗಳ ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ.

ಹಾಳಾದ ಕಾಲುವೆಗಳು

ಬ್ಯಾಡಗಿ: ತಾಲ್ಲೂಕಿನಲ್ಲಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದು ಮಳೆಗಾಲದಲ್ಲಿ ಮಾತ್ರ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತದೆ. ಕಾಲುವೆಗಳು ಅಲ್ಲಲ್ಲಿ ಹಾಳಾಗಿದೆ. ಅವುಗಳ ದುರಸ್ತಿ ಕಾರ್ಯವನ್ನು ನೀರಾವರಿ ನಿಗಮ ಕೈಗೊಂಡಿಲ್ಲ.

ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ವರದಾ ನದಿಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತಿದ್ದು ಮಳೆಗಾಲದಲ್ಲಿ ಮಾತ್ರ ನೀರು ಲಭ್ಯವಾಗುತ್ತದೆ. ವರದಾ ನದಿಗೆ ಅಡ್ಡಲಾಗಿ ಯಾವುದೇ ಜಲಾಶಯಗಳಿಲ್ಲ. ಬೇಸಿಗೆಯಲ್ಲಿಯೂ ನೀರು ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಜಲಾಶಯ ನಿರ್ಮಿಸುವುದು ಅಗತ್ಯವಾಗಿದೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಹೇಳಿದರು.

ಕೆರೆಗಳನ್ನು ತುಂಬಿಸುವ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ವೇಗ ಹೆಚ್ಚಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಆಗ್ರಹಿಸಿದ್ದಾರೆ.

ಕೆರೆ ಭರ್ತಿಗೆ ‘ವರದಾ’ ಆಸರೆ

ಶಿಗ್ಗಾವಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಕೆರೆ ಕಟ್ಟೆಗಳನ್ನು ತುಂಬಿಸುವ ನೀರಾವರಿ ಯೋಜನೆಯಿಂದ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಿದೆ.

ತಾಲ್ಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಸುಮಾರು 20ಕ್ಕೂ ಹೆಚ್ಚಿನ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ವರದಾ ನದಿಯಿಂದ ಸುಮಾರು 15ರಿಂದ 20 ಕಿ.ಮೀ. ದೂರದ ಕೆರೆಗಳಿಗೂ ಸಹ ನೀರು ಬಿಡಲಾಗುತ್ತಿದೆ. ಅದರಿಂದ ಕರೆಗಳು ಮಾರ್ಚ್ ತಿಂಗಳವರೆಗೆ ಭರ್ತಿಯಾಗಿರುತ್ತವೆ.

‘ಜನ–ಜಾನುವಾರುಗಳಿಗೆ ಅನುಕೂಲವಾಗಿದ್ದು, ನಾಗನೂರು ಕೆರೆ ಪಟ್ಟಣದಲ್ಲಿನ ಜನರಿಗೆ ವರ್ಷವಿಡೀ ಕುಡಿಯುವ ನೀರಿನ ಬಳಕೆಗೆ ಉತ್ತಮವಾಗಿದೆ’ ಎಂದು ಪಟ್ಟಣದ ನಿವಾಸಿ ಕಾಂತಪ್ಪ ವ್ಯಕ್ತಪಡಿಸುತ್ತಾರೆ.

ಉಪ ಕಾಲುವೆ ನಿರ್ಮಿಸಲು ಒತ್ತಾಯ

ರಾಣೆಬೆನ್ನೂರು: ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಮುಖ್ಯ ಕಾಲುವೆಯಿಂದ ರೈತರ ಹೊಲಗಳಿಗೆ ನೀರು ಹಾಯಿಸುವ ಉಪಕಾಲುವೆ ಹಾಗೂ ಹೊಲಗಾಲುವೆ ನಿರ್ಮಿಸಲು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಯೋಜನೆ ಮುಖ್ಯ ಕಾಲುವೆ ಕೆಲವು ಕಡೆ ಒಡೆದು ಭಾರಿ ಪ್ರಮಾಣದ ನೀರು ರೈತರ ಹೊಲಗಳಿಗೆ ನುಗ್ಗಿ ಅಪಾರ ಬೆಳೆಹಾನಿಯಾದ ಘಟನೆಗಳು ನಡೆದಿವೆ.

ಈ ಯೋಜನೆ ನಾಲೆಯ ಕಾಮಗಾರಿಯು 272 ಕಿ.ಮೀ.ನಷ್ಟಿದ್ದು, ಅದರಲ್ಲಿ 245 ಕಿ.ಮೀ.ನಷ್ಟು ನಾಲೆ ಕಾಮಗಾರಿಯು ಸಂಪೂರ್ಣ ಮುಗಿದಿದೆ. ಹೀಗಾಗಿ 232 ಕಿ.ಮೀ.ನಷ್ಟು ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ.

ಈ ಯೋಜನೆಯಡಿ ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಅಡಿಯಲ್ಲಿ ಬರುವ 80,434 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. 1991ರಲ್ಲಿ ಅನುಮೋದನೆ ಪಡೆದ ಈ ಯೋಜನೆಯು 22 ಸಾವಿರ ಹೆಕ್ಟೇರ್‌ನಷ್ಟು ನೀರಾವರಿ ಸಾಮರ್ಥ್ಯದ ಗುರಿಯನ್ನು ಹೊಂದಿದೆ.

ಈ ಯೋಜನೆಯ ಅಂದಾಜು ವೆಚ್ಚ ₹ 1,052 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು ₹987 ಕೋಟಿ ಖರ್ಚು ಮಾಡಲಾಗಿದೆ.

ನನೆಗುದಿಗೆ ಬಿದ್ದ ಉಪಕಾಲುವೆ ಕಾಮಗಾರಿ

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ಹಾದು ಹೋಗಿರುವ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ನಿರ್ಮಾಣದಿಂದ ತಾಲ್ಲೂಕಿನ ಕಮಲಾಪುರ, ಮೈದೂರು, ಚಿಕ್ಕಕಬ್ಬಾರ ಸೇರಿದಂತೆ ಹಲವಾರು ಗ್ರಾಮಗಳ ರೈತರಿಗೆ ವರದಾನವಾಗಿದೆ.

15,600 ಹೆಕ್ಟೇರ್ ಪ್ರದೇಶ ನೀರಾವರಿ ಕ್ಷೇತ್ರ ಹೊಂದಿದ್ದು, ಮುಖ್ಯ ಕಾಲುವೆ ಕಮಲಾಪುರದಿಂದ ನೇಶ್ವಿ ಗ್ರಾಮದವರೆಗೆ ಅಂದರೆ 66 ಕಿ.ಮೀ. ನೀರಾವರಿ ವ್ಯಾಪ್ತಿ ಹೊಂದಿರುತ್ತದೆ. 24 ಉಪ ಕಾಲುವೆಗಳಿಂದ ಹೊಲಗದ್ದೆಗಳಿಗೆ ನೀರು ಪೂರೈಸಲಾಗುತ್ತದೆ.

ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯಕಾಲುವೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂ ನಿಂದ ಹರಿಯುವ ತುಂಗಾನದಿ ನೀರು, ಜುಲೈದಿಂದ ನವೆಂಬರ್‌ವರೆಗೆ ಮುಖ್ಯ ಕಾಲುವೆ ಮೂಲಕ ಬಿಡಲಾಗುತ್ತದೆ.

ಮುಖ್ಯ ಕಾಲುವೆಯಿಂದ ಹೊರಹೋಗುವ ಉಪ ಕಾಲುವೆಗಳು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಒತ್ತಾಯಿಸಿದರು.

ಯುಟಿಪಿ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟಗಳು ನಡೆದಿವೆ. ಭೈರನಪಾದದ ಸಮೀಪದ ತುಂಗಾಭದ್ರಾ ನದಿಯಿಂದ ಶಿಕಾರಿಪುರ ತಾಲ್ಲೂಕಿನ ಗ್ರಾಮಗಳ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಕೃಷಿ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಸಬಾರದು, ರಸ್ತೆ ಪಕ್ಕದಲ್ಲೇ ಪೈಪ್‌ಲೈನ್ ಅಳವಡಿಸಬೇಕು ಎಂಬುದು ಈ ಭಾಗದ ರೈತರ ಒಕ್ಕೊರಲ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.