ಶುಕ್ರವಾರ, ಡಿಸೆಂಬರ್ 3, 2021
20 °C
ಚುನಾವಣಾ ಪ್ರಚಾರದಲ್ಲಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ಆಪಾದಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಸಚಿವ ಬಿ.ಶ್ರೀರಾಮುಲು ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಳವಳ್ಳಿ: ‘ಸಿ.ಎಂ.ಉದಾಸಿಯವರು ಹಾನಗಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಹಾಗೂ ಅಭಿವೃದ್ಧಿ ಕೆಲಸಗಳು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕೈಹಿಡಿಯಲಿದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ತಿಳವಳ್ಳಿ ಸಮೀಪದ ಮುಳಥಳ್ಳಿ, ಬ್ಯಾಗವಾದಿ, ಕೆಲವರಕೊಪ್ಪ ಗ್ರಾಮಗಳಲ್ಲಿ ಪಕ್ಷದ ಬಿಜೆಪಿ ಪರ ಪ್ರಚಾರದಲ್ಲಿ ವರರು ಮಾತನಾಡಿದರು.

‘ಸಿದ್ದರಾಮಯ್ಯ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಸರ್ಕಾರದ ಅವಧಿಯಲ್ಲಿ ಈ ಸಕ್ಕರೆ ಕಾರ್ಖಾನೆ ನೆನಪಿಗೆ ಬರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಉದಾಸಿ, ಶಿವರಾಜ ಸಜ್ಜನರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಆಪಾದಿಸುವುದೇ ಕಾಂಗ್ರೆಸ್ ಸಂಸ್ಕೃತಿ’ ಎಂದು ಟೀಕಿಸಿದರು.

‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದರು. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಿದರು. ನನ್ನ ಎಲ್ಲ ವಾಲ್ಮೀಕಿ ಬಂಧುಗಳು ಶಿವರಾಜ ಸಜ್ಜನರಗೆ ಮತ ನೀಡಬೇಕು’ ಎಂದರು.

ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಮಂಜುನಾಥ ಓಲೇಕಾರ, ರಾಮಣ್ಣ ಮಾದಾಪುರ, ಸುಭಾಸ ಗೋರನವರ, ಲಕ್ಷ್ಮಣ ದೊಡ್ಡಲಿಂಗಣ್ಣನವರ, ಶಿವಪ್ಪ ದೊಡ್ಡಲಿಂಗಣ್ಣನವರ, ಪ್ರಭು ಕನ್ನೇಶ್ವರ, ಹನುಮಂತಪ್ಪ ಬುಳ್ಳಣ್ಣನವರ, ಸುರೇಶ ಸುಣಗಾರ, ಅಶೋಕ ಪೂಜಾರ, ಸುರೇಶ ಭಜಂತ್ರಿ, ಸುಧಾ ಮೇಗಳವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು