ಶುಕ್ರವಾರ, ಆಗಸ್ಟ್ 19, 2022
22 °C

ಮತದಾರರ ದಿನಾಚರಣೆ: ವಿವಿಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯ ಪ್ರಯುಕ್ತ ‘ಭಾವಿ ಮತದಾರ’ರಿಗೆ ಅಂದರೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ತಾಲ್ಲೂಕು ಮಟ್ಟದ ವಿವಿಧ ಸ್ಫರ್ಧೆಗಳನ್ನು ನಗರದ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಕನ್ನಡ ಪ್ರಬಂಧ ಸ್ಫರ್ಧೆ: ಹಾವನೂರು ಸರ್ಕಾರಿ ಪ್ರೌಢಶಾಲೆಯ ಮೇಘನಾ ಜೋಗ್, ನೆಗಳೂರು ಯೋಗಿವೆಮನ್ ಪ್ರೌಢಶಾಲೆಯ ಅನುಷಾ ರಾಮಗಿರಿ ಹಾಗೂ ಹಾವೇರಿ ಜೆ.ಪಿ. ರೋಟರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವೀಣಾ ಕರಿಯಣ್ಣನವರ ವಿಜೇತರಾಗಿದ್ದಾರೆ.

ಇಂಗ್ಲಿಷ್‌ ಪ್ರಬಂಧ ಸ್ಫರ್ಧೆ: ಹಾವೇರಿ ಸಾಯಿಚಂದ್ರ ಗುರುಕುಲ ಪ್ರೌಢಶಾಲೆಯ ಅನುಷಾ ನಿಂಗೋಜಿ, ಸೆಂಟ್ ಆನ್ಸ್ ಪ್ರೌಢ ಶಾಲೆ ಸೃಷ್ಟಿ ನಡುವಿನಮಠ ಹಾಗೂ ತರಳಬಾಳು ಪ್ರೌಢಶಾಲೆ ಪೂಜಾ ಹಸಬಿ ವಿಜೇತರಾಗಿದ್ದಾರೆ.

ಭಿತ್ತಿಪತ್ರ ಸ್ಫರ್ಧೆ: ಹಾವೇರಿಯ ಎಸ್.ಎಂ.ಎಸ್ ಪ್ರೌಢಶಾಲೆ ವಿನಾಯಕ ದೇಶಪಾಂಡೆ, ಹುಕ್ಕೇರಿಮಠ ಪ್ರೌಢಶಾಲೆ ಜಾನಕಿ ಹಾಗೂ ಜೆ.ಪಿ ರೋಟರಿ ಪ್ರೌಢಶಾಲೆ ಸ್ಫೂರ್ತಿ ಕಲಾಲ್ ವಿಜೇತರಾಗಿದ್ದಾರೆ.

ರಸಪ್ರಶ್ನೆ ಸ್ಪರ್ಧೆ: ಆಲದಕಟ್ಟಿ ಬಸವೇಶ್ವರ ಪ್ರೌಢಶಾಲೆಯ ಸಾನಿಯಾ ಹುಮನಾಬಾದಿ, ಹಳೇರಿತ್ತಿ ಸರ್ಕಾರಿ ಪ್ರೌಢಶಾಲೆಯ ಶ್ರೇಯಾಂಕ ಕಮತರ್ ಹಾಗೂ ದೇವಿಹೊಸೂರ ಶಾಲೆಯ ಸ್ವಾತಿ ಕಹರ್ ವಿಜೇತರಾಗಿದ್ದಾರೆ.

ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಂತಹ ವಿದ್ಯಾರ್ಥಿಗಳು ಜಿಲ್ಲಾ ಹಂತದ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ್, ಶಿಕ್ಷಣಾಧಿಕಾರಿ ಶ್ರೀಧರ ಎನ್, ಹಿರಿಯ ಉಪನ್ಯಾಸಕ ಎಸ್.ಜಿ ಕೋಟಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್ ಭಗವಂತಗೌಡ್ರ, ಜಿಲ್ಲಾ ನೋಡಲ್ ಅಧಿಕಾರಿ ಸಿಕಂದರ್ ಮುಲ್ಲಾ ಶುಭ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು