ಆಳಂದ: ತಾಲ್ಲೂಕಿನಲ್ಲಿ ತೋಟದ ಮನೆಗಳಲ್ಲಿ ವಾಸವಿರುವ ರೈತ ಕುಟುಂಬಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಒದುಗಿಸಲಾಗುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.

ಪಟ್ಟಣದ ಲಿಂಗಾಯತ ಭವನದಲ್ಲಿ ಬುಧವಾರ ಗುಲಬರ್ಗಾ ವಿದ್ಯುಚ್ಛಕ್ತಿ ಸರಬುರಾಜು ಕಂಪನಿ ನಿಯಮಿತದ ಸಹಯೋಗದಲ್ಲಿ ಆಳಂದ, ಕಡಗಂಚಿ ಉಪ ವಿಭಾಗದಿಂದ ಹಮ್ಮಿಕೊಂಡ ವಿದ್ಯುತ್ ಪರಿವರ್ತಕ ಪ್ರಯೋಗಾಲಯ ಮತ್ತು ತೋಟದ ಮನೆಗಳಿಗೆ ವಿದ್ಯುತ್ ಸೌಲಭ್ಯಕ್ಕೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆ, ತೋಟಗಾರಿಕೆ ಹಾಗೂ ತರಕಾರಿ ಬೆಳೆಯಲು ಸಹಾಯಕವಾಗಲಿದೆ, ಕುಟುಂಬ ಸದಸ್ಯರು ಪರಸ್ಪರ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಹೆಚ್ಚಲಿದೆ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಈಗಾಗಲೇ ತೋಟದ ಮನೆಗಳ ಸಮೀಕ್ಷೆ ನಡೆಸುತ್ತಿದ್ದಾರೆ. ಅರ್ಹ ರೈತರಿಗೆ ತಕ್ಷಣ ವಿದ್ಯುತ್ ಸರಬುರಾಜು ಕೈಗೊಳ್ಳುತ್ತಾರೆ. ರೈತರೂ ವಿದ್ಯುತ್ ಅಪವ್ಯಯ ಆಗದಂತೆ ಎಚ್ಚರವಹಿಸಲು ಸಲಹೆ ನೀಡಿದರು.

ಆಳಂದ ತಾಲ್ಲೂಕಿನಲ್ಲಿ ಪವನಶಕ್ತಿ, ಸೋಲಾರ್ ವಿದ್ಯುತ್ ಶಕ್ತಿ ಉತ್ಪಾದನೆಯು ಹೆಚ್ಚುತ್ತಿದೆ. ನಮ್ಮ ಹೊಲ–ನಮ್ಮ ರಸ್ತೆ ಯೋಜನೆಯಡಿ ರೈತರಿಗೆ ಸಂಪರ್ಕ ರಸ್ತೆ ಕೈಗೊಳ್ಳಲಾಗುತ್ತಿದೆ. ಜೆಸ್ಕಾಂ ಸಿಬ್ಬಂದಿಗಳು ಸಹ ವಿದ್ಯುತ್ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಮುತುವರ್ಜಿವಹಿಸಲು ಸೂಚಿಸಿದರು.

ಕಲಬುರಗಿ ಜೆಸ್ಕಾಂ ಕೃಷ್ಣಾ ಬಾಜಪೇಯಿ ಮಾತನಾಡಿ, ತಾಲ್ಲೂಕಿನಲ್ಲಿ ೭೨೦ ರೈತರ ತೋಟದ ಮನೆ ಗುರುತಿಸಲಾಗಿದೆ, ರೈತರೂ ಅಗತ್ಯ ಆರ್ ಆರ್ ಸಂಖ್ಯೆ, ಪಹಣಿ ಜತೆಗೆ ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ದೊರೆಯಲಿದೆ, ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಮಾದನ ಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ, ವೆಂಕಟೇಶ ಹಾಲ್ವಿ, ಖಂಡಪ್ಪ ಸೋನಾವಣೆ ಮಾತನಾಡಿದರು.

ಕಲಬುರಗಿ ಗ್ರಾಮೀಣ ಕಾರ್ಯನಿರ್ವಾಹಕ ಅಭಿಯಂಯರ ಎಂ.ಎ.ಮಠಪತಿ ಅಧ್ಯಕ್ಷತೆವಹಿಸಿದರು. ಪುರಸಭೆ ಅಧ್ಯಕ್ಷ ಫಿರ್ದೋಶಿ ಅನ್ಸಾರಿ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಶಿವಪುತ್ರಪ್ಪ ಪಾಟೀಲ, ಸಂತೋಷ ಚವ್ಹಾಣ, ಎಇಇ ಪ್ರಭು ಮಡ್ಡಿತೋಟ, ರಾಘವೇಂದ್ರ ಪಾಟೀಲ, ಮೃತ್ಯುಂಜಯ ಆಲೂರೆ, ಸಂಜಯ ನಾಯಕ, ಸಿದ್ದು ಪೂಜಾರಿ ಉಪಸ್ಥಿತರಿದ್ದರು. ಸಂಗೀತ ಕಲಾವಿದ ಶಿವಶರಣಪ್ಪ ಪೂಜಾರಿ, ಅಶೋಕ ಆಳಂದ ಅವರಿಂದ ವಚನ ಗಾಯನ ಜರುಗಿತು. ಇದೇ ಸಂದರ್ಭದಲ್ಲಿ ವಿದ್ಯುತ್ ಅವಘಡದಲ್ಲಿ ಮೃತ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾದ ಚೆಕ್ ವಿತರಣೆ ಮಾಡಲಾಯಿತು. ವಿರೇಶ ಬೋಳಶೆಟ್ಟಿ ನಿರೂಪಿಸಿದರೆ, ಪ್ರಭು ಮಡಿತೋಟ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.