ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ‘ಕೋವಿಡ್’ ಗೆದ್ದುಬಂದ ಅಜ್ಜಿಯರು...

ಮೂವರು ಮಹಿಳೆಯರು ಸೋಂಕು ಮುಕ್ತ, ಉಳಿದವರಲ್ಲಿ ಹೆಚ್ಚಿದ ಭದ್ರತೆಯ ಭಾವ
Last Updated 24 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್–19 ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ವೃದ್ಧೆಯರೂ ಸೇರಿ ಮೂವರು ಮಹಿಳೆಯರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಗರದ 72 ವರ್ಷದ ಅಜ್ಜಿ (ಸಂಖ್ಯೆ 178) ಕೋವಿಡ್‌ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ‘ಜಯ ಸಾಧಿಸಿದ್ದಾರೆ’. ‌ಇವರ ಹಿಂದೆಯೇ ಆಸ್ಪತ್ರೆ ಸೇರಿದ್ದ ಶಹಾಬಾದ್‌ ಪಟ್ಟಣದ 60 ವರ್ಷದ (ಸಂಖ್ಯೆ 124) ವೃದ್ಧೆ ಹಾಗೂ 28 ವರ್ಷದ ಗೃಹಿಣಿ (ಸಂಖ್ಯೆ174) ಗುಣಮುಖರಾಗಿ ಗುರುವಾರ ಮನೆಗೆ ಮರಳಿದ್ದಾರೆ.‌

ದೇಶದಾದ್ಯಂತ ಕೋವಿಡ್‌ ಪೀಡೆಯಿಂದ ಮೃತಪಟ್ಟವರಲ್ಲಿ ಬಹುಪಾಲು ಮಂದಿ ಹಿರಿಯ ನಾಗರಿಕರೇ ಆಗಿದ್ದಾರೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಕಲಬುರ್ಗಿಯಲ್ಲಿ ಈವರೆಗೆ ಮೃತಪಟ್ಟ ನಾಲ್ವರು ಕೂಡ 60 ವರ್ಷ ಮೇಲ್ಪಟ್ಟವರು.

ಮೃತಪಟ್ಟವರೂ ಹಿರಿಯರೇ!

ಮಾರ್ಚ್‌ 10: ದೇಶದಲ್ಲೇ ಮೊದಲ ಸಾವು ಎಂದು ದಾಖಲಾದ ಮೊಹಮದ್‌ ಸಿದ್ದಿಕಿ (76 ವರ್ಷ) ಮೃತಪಟ್ಟರು.ಸೌದಿ ಅರೇಬಿಯಾದಿಂದ ಮರಳಿದ ಅವರು ಸೋಂಕು ಅಂಟಿಸಿಕೊಂಡೇ ಬಂದಿದ್ದರು.

ಏಪ್ರಿಲ್‌ 9: ಸಿದ್ದಿಕಿ ಅವರ ಸಾವಾಗಿ ತಿಂಗಳ ನಂತರ ಎರಡನೇ ಸಾವು ಸಂಭವಿಸಿತು. ನಗರದಸಂತ್ರಾಸವಾಡಿಯ 65 ವರ್ಷದ ಹಣ್ಣಿನ ವ್ಯಾಪಾರಿ ಮೃತಪಟ್ಟರು. ಪುಣೆಯ ಪ್ರಯಾಣದ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಏಪ್ರಿಲ್‌ 13: ಮೋಮಿನ್‌ಪುರ ಬಡಾವಣೆಯ ನಿವಾಸಿ ಆಗಿದ್ದ 55 ವರ್ಷದ ಪ್ರಸಿದ್ಧ ಬಟ್ಟೆ ವ್ಯಾಪಾರಿ ಸದೃಢರಾಗಿದ್ದರೂ, ಕೊನೆಯುಸಿರೆಳೆದರು.ದೆಹಲಿಯ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿ ಬಂದಿದ್ದ ಪಕ್ಕದ ಮನೆಯ ವ್ಯಕ್ತಿಯೊಂದಿಗಿನ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿತ್ತು.

ಏಪ್ರಿಲ್‌ 21: ದರ್ಗಾ ರಸ್ತೆಯ ನಿವಾಸಿಯಾಗಿದ್ದ 80 ವರ್ಷದ ವೃದ್ಧನದು ನಾಲ್ಕನೇ ಸಾವು. ಎರಡೂವರೆ ವರ್ಷಗಳಿಂದ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದ ಅವರಿಗೆ ಕೋವಿಡ್‌ ಅಂಟಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗೇ ಇದೆ.

‌ಮನೆಗೆ ಮರಳಿದ ಅತ್ತೆ ಸೊಸೆ: ಶಹಾಬಾದ್‌ ನಿವಾಸಿಗಳಾದ60 ವರ್ಷದ ವೃದ್ಧೆ ಹಾಗೂ 28 ವರ್ಷದ ಮಹಿಳೆ ಸ್ವಂತ ಅತ್ತೆ– ಸೊಸೆ ಆಗಬೇಕು.ವೈರಾಣು ವಿರುದ್ಧದ ಹೋರಾಟದಲ್ಲಿ ಜಯಶಾಲಿ ಆಗುವ ಮೂಲಕ, ಈ ಹಿರಿಯ ಜೀವಿ ತಮ್ಮ ಸೊಸೆಯೊಂದಿಗೆ ಮನೆಗೆ ಮರಳಿದ್ದಾರೆ.

ಶಹಾಬಾದ್‌ ಮಡ್ಡಿ ಬಡಾವಣೆಯ ವ್ಯಾಪಾರಿ 65 ವರ್ಷದ ವ್ಯಕ್ತಿ (ಅಜ್ಜಿಯ ಗಂಡ) ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಗಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಅವರು ಮರಳಿದ ಮೇಲೆ ಅವರ ಪತ್ನಿ ಹಾಗೂ ಸೊಸೆಗೆ ಪಾಸಿಟಿವ್‌ ಇದ್ದುದು ಪತ್ತೆಯಾಗಿತ್ತು.‌ ಆದರೆ, ವೃದ್ಧನಿಗೆ ಮಾತ್ರ ಇನ್ನೂ ಸೋಂಕು ದೃಢಪಟ್ಟಿಲ್ಲ. ಅವರು ಗೃಹಬಂಧನದಲ್ಲಷ್ಟೇ ಇದ್ದಾರೆ.

6ಕ್ಕೆ ಏರಿದ ‘ಸೋಂಕುಮುಕ್ತ’ರ ಸಂಖ್ಯೆ
ಜಿಲ್ಲೆಯಲ್ಲಿ ಈವರೆಗೆ 36 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಹಿಂದೆಯೇ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಮತ್ತೆ ಮೂವರೂ ಸೇರಿ ಗುಣಮುಖರಾದವರ ಸಂಖ್ಯೆ 6ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT