‘ನಾಗರಿಕರು ಸಂಯಮ ಕಾಯ್ದುಕೊಳ್ಳಿ’
‘ಸಾರ್ವಜನಿಕರು ಮನೆಗಳ್ಳತನ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದರಿಂದ ಸೀನ್ ಆಫ್ ಕ್ರೈಂ ಎಫ್‌ಎಸ್‌ಎಲ್ ಹಾಗೂ ಶ್ವಾನ ದಳ ತಂಡಗಳು ವೈಜ್ಞಾನಿಕವಾಗಿ ಸಾಕ್ಷ್ಯ ಕಲೆ ಹಾಕಲು ಸಾಧ್ಯವಾಗುತ್ತದೆ. ಕಳವು ನಡೆದಾಗ ಗಾಬರಿಯಾಗಿ ಅಲ್ಮೇರಾ ತಡಕಾಡುವುದು ಎಲ್ಲೆಡೆ ಓಡಾಡುವುದು ಸಂಬಂಧಿಕರು ನೆರೆಹೊರೆಯವರನ್ನು ಕೃತ್ಯ ನಡೆದ ಸ್ಥಳದಲ್ಲಿ ಬಿಟ್ಟುಕೊಳ್ಳುವುದರಿಂದ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ನಾಗರಿಕರು ಸಂಯಮ ಕಾಯ್ದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಬೇಕು’ ಎಂದು ಕಮಿಷನರ್ ಶರಣಪ್ಪ ಕೋರಿದರು.