ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿಯಲ್ಲಿ ಬಡವರಿಗಾಗಿ ಐವಿಎಫ್‌ ಕೇಂದ್ರ ಸ್ಥಾಪನೆ: ಲಿಂಗರಾಜ ಪಾಟೀಲ್

Published 23 ಆಗಸ್ಟ್ 2024, 15:16 IST
Last Updated 23 ಆಗಸ್ಟ್ 2024, 15:16 IST
ಅಕ್ಷರ ಗಾತ್ರ

ಕಲಬುರಗಿ: ‘ಬಡವರ ಅನುಕೂಲಕ್ಕಾಗಿ ಎಸ್‌.ಆರ್. ಪಾಟೀಲ್‌ ಫೌಂಡೇಶನ್‌ ಹಾಗೂ ಪಾಟೀಲ್‌ ಗ್ರೂಫ್‌ ಆಫ್‌ ಇಂಡಸ್ಟ್ರೀಸ್‌ ವತಿಯಿಂದ ಕಿಮ್ಸ್ ಸಹಯೋಗದಲ್ಲಿ ಐವಿಎಫ್‌ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಿರ್ಮಿಸಿದ ಕೇಂದ್ರವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು’ ಎಂದು ಪಾಟೀಲ ಗ್ರೂಫ್‌ ಆಫ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಸೇವೆ ಮಾಡುವ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಕಲಬುರಗಿಯ ವಿಮಾನ ನಿಲ್ದಾಣದ ಬಳಿ 5 ಎಕರೆ ಜಾಗದಲ್ಲಿ ಮಾನವೀಯ ಕಲ್ಯಾಣ ಟ್ರಸ್ಟ್‌ನ ಅಡಿಯಲ್ಲಿ ಆನಂದ ಕುಟುಂಬ ಹೆಸರಿನಲ್ಲಿ ಸುಮಾರು 30 ವಯೋವೃದ್ಧ ಜೋಡಿಗಳಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಉನ್ನತ ಶಿಕ್ಷಣ ಪಡೆದು ಕೆಲಸ ಹುಡುಕಿಕೊಂಡು ಮಕ್ಕಳು ವಿದೇಶಗಳಿಗೆ ಹೋಗಿರುತ್ತಾರೆ. ಅವರ ಪಾಲಕರು ಇಲ್ಲಿ ಸರಿಯಾಗಿ ಆರೈಕೆ ಸಿಗದೆ ಕಷ್ಟ ಅನುಭವಿಸುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿ ಎಲ್ಲ ಸೌಲಭ್ಯ ಒಳಗೊಂಡಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೌಶಲ ಕೇಂದ್ರ ಸ್ಥಾಪಿಸಿ ಉನ್ನತ ಮಟ್ಟದ ತರಬೇತಿಗಳಾದ ಎಐ ಹಾಗೂ ಮಶಿನ್ ಲರ್ನಿಂಗ್‌ ತರಬೇತಿ ನೀಡಲು ನಮ್ಮ ಸಂಸ್ಥೆ ಮುಂದಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌.ಆರ್. ಪಾಟೀಲ್‌ ಫೌಂಡೇಶನ್‌ ಅಧ್ಯಕ್ಷ ಮನು ಬಳಿಗಾರ, ಎಸ್‌.ಎಸ್‌. ಪಾಟೀಲ, ಸಿದ್ದು ಪಾಟೀಲ, ಕಾರ್ತಿಕ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT