ಬಳೂರ್ಗಿ ಗ್ರಾಮ ಪಂಚಾಯಿತಿ: ಅತ್ತೆ– ಸೊಸೆಗೆ ಗೆಲುವು

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿದ್ದ ಅತ್ತೆ ಸೊಸೆ ಇಬ್ಬರು ಜಯಗಳಿಸಿದ್ದಾರೆ.
ಬುಧವಾರ ನಡೆದ ಮತ ಎಣಿಕೆಯಲ್ಲಿ ಗ್ರಾಮದ ವಾರ್ಡ್ ನಂ–2ರಲ್ಲಿ ಪಾರುಬಾಯಿ ಫಲಾಲಸಿಂಗ್ ರಾಠೋಡ 150 ಮತ ಮತ್ತು ವಾರ್ಡ್ ನಂ.1ರಿಂದ ಅವರ ಸೊಸೆ ಪ್ರೀತಿ ಸಂದೀಪ ರಾಠೋಡ 78 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಾರುಬಾಯಿ ಮತ್ತು ಪ್ರೀತಿ ಮಾತನಾಡಿ, ಮುಂದಿನ 5 ವರ್ಷಗಳಲ್ಲಿ ವಾರ್ಡ್‌ಗಳ ಮೂಲ ಸೌಲಭ್ಯ ಕಲ್ಪಿಸಲು ಕೆಲಸ ಮಾಡುತ್ತೇವೆ. ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.