ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಯ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ಸಚಿವ ನಿರಾಣಿ

Last Updated 7 ಜುಲೈ 2021, 7:32 IST
ಅಕ್ಷರ ಗಾತ್ರ

ಕಲಬುರ್ಗಿ: ಬಳ್ಳಾರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಕಾಲೇಜನ್ನು ಆರಂಭಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರನ್ನು ಆಹ್ವಾನಿಸಲು ದೆಹಲಿಗೆ ತೆರಳಿದ್ದೆ. ಉಳಿದದ್ದು ಮಾಧ್ಯಮಗಳ ಸೃಷ್ಟಿ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.

ನಗರದಲ್ಲಿ ಕ್ರೆಡೆಲ್ ಪ್ರಾದೇಶಿಕ ಕಚೇರಿಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೊಂದಿಗೆ ನಾನು ಯಾವುದೇ ಮಾತುಕತೆ ‌ನಡೆಸಿಲ್ಲ. ಪ್ರತಿ 15 ದಿನಗಳಿಗೊಮ್ಮೆ ದೆಹಲಿಗೆ ಹೋಗುತ್ತೇನೆ. ಇದರಲ್ಲಿ ಇಲಾಖೆ ಹಾಗೂ ವೈಯಕ್ತಿಕ ಕೆಲಸಗಳೂ ಇರುತ್ತವೆ. ಗುರುವಾರವೂ ದೆಹಲಿಗೆ ‌ಹೋಗುತ್ತೇನೆ ಎಂದರು.

ಅಕ್ರಮ ಗಣಿಗಾರಿಕೆ ಹಾಗೂ ‌ಮರಳು ದಂದೆ ನಡೆಯುತ್ತಿರುವುದು ನಿಜ. ಇದನ್ನು ತಡೆಗಟ್ಟಲು 50 ಕೆ.ಜಿ. ಪ್ಯಾಕೆಟ್ ಹಾಗೂ 1 ಟನ್ ಮರಳಿನ ಜಂಬೊ ಪ್ಯಾಕೆಟ್ ಗಳಲ್ಲಿ ಮರಳನ್ನು ಪೂರೈಸಲಾಗುವುದು. ಇಲಾಖೆ ಅನುಮತಿ ನೀಡಿದ ಮರಳು ಬ್ಲಾಕ್ ಗಳಿಂದ ಸಂಗ್ರಹಿಸುವುದರಿಂದ ಉತ್ತಮ ಗುಣಮಟ್ಟದ ಮರಳನ್ನು ಗ್ರಾಹಕರಿಗೆ ಪೂರೈಸಬಹುದಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿವರ್ಷ 280 ಮಿಲಿಯನ್ ಟನ್ ಮರಳು ಅಗತ್ಯವಿದೆ. ಇವುಗಳನ್ನು ರಾಜ್ಯದಲ್ಲಿ ಅನುಮತಿ ನೀಡಲಾದ 219 ಮರಳು ಬ್ಲಾಕ್ ಗಳಿಂದ ‌ಸಂಗ್ರಹಿಸಿ ರಾಜ್ಯದ 500 ಡಿಪೊಗಳಲ್ಲಿ ಮಾರಾಟ ಮಾಡಲಾಗುವುದು. ಬೆಲೆಯೂ ಹೆಚ್ಚಳವಾಗುವುದಿಲ್ಲ. ಈಗಾಗಲೇ ಮರಳು ಪ್ಯಾಕಿಂಗ್ ಗೆ ಟೆಂಡರ್ ಕರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT