ಶನಿವಾರ, ಜನವರಿ 18, 2020
19 °C

ಸುರಪುರ: 3 ಜನ ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ನಗರದ ಪೊಲೀಸರು ಲಾರಿ ತಡೆದು ದರೋಡೆ ಮಾಡಿ ಪರಾರಿಯಾಗುತ್ತಿದ್ದ ತಾಲ್ಲೂಕಿನ ದೀವಳಗುಡ್ಡದ ಮರೆಪ್ಪ ಯಂಕಪ್ಪ ಕಾಠೆ, ಮರೆಪ್ಪ ಪರಮಣ್ಣ ಸೋಮನವರ, ಚೆಳ್ಳಿಗೆಪ್ಪ ದ್ಯಾವಪ್ಪ ಬಿರಾದಾರ ಎಂಬ ಮೂವರನ್ನು ಭಾನುವಾರ ಬೆಳಿಗ್ಗೆ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಘಟನೆ ವಿವರ:

ಹಸನ್ ಪಟೇಲ ಎಂಬುವವರು ಲಾರಿಯಲ್ಲಿ ಮೊಟ್ಟೆ ತುಂಬಿಕೊಂಡು ಬಳ್ಳಾರಿಯಿಂದ ಜೇವರ್ಗಿಗೆ ಹೊರಟ್ಟಿದ್ದರು. ತಾಲ್ಲೂಕಿನ ಬಿಜಾಸ್ಪೂರ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ದರೋಡೆಕೋರರು ಬೈಕ್ ಅಡ್ಡ ಇಟ್ಟು ಲಾರಿಯನ್ನು ತಡೆದಿದ್ದಾರೆ. ರಾಡ್ ಮತ್ತು ಕಲ್ಲಿನಿಂದ ಲಾರಿಯ ಗಾಜು ಒಡೆದು ಹಾಕಿದ್ದಾರೆ. ಲಾರಿ ಚಾಲಕ ಹಸನ್‍ಪಟೇಲ ಮತ್ತು ಕ್ಲೀನರ್ ಫಕ್ರುದ್ದೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.

ಚಾಲಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಣವನ್ನು ದೋಚಿ ಪರಾಯಾಗುತ್ತಿದ್ದ ದರೋಡೆಕೋರರನ್ನು ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಸಾವಿರ ನಗದು, ದರೋಡೆಗೆ ಬಳಸಿದ ಪಲ್ಸ್‍ರ್ ಬೈಕ್, ಒಂದು ರಾಡ್, ಒಂದು ಕಲ್ಲು, ಮೂರು ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಡಿವೈಎಸ್‍ಪಿ ಶಿವನಗೌಡ ಪಾಟೀಲ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‍ಸ್ಪೆಕ್ಟರ್ ಆನಂದರಾವ, ಸಹಾಯಕ ಇನ್‌ಸ್ಪೆಕ್ಟರ್ ಶರಣಪ್ಪ ಹವಲ್ದಾರ, ಎಎಸ್‍ಐ ಸುರೇಶ, ಪಿಸಿಗಳಾದ ಚಂದ್ರಶೇಖರ, ಬಸವರಾಜ, ಸುಭಾಷ, ಸೋಮಯ್ಯಾ, ದಯಾನಂದ ಭಾಗವಹಿಸಿದ್ದರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು