ಜೇವರ್ಗಿ: ‘ನೀತಿಯುಕ್ತ ಉತ್ತಮ ಸಂದೇಶಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ, ಸುಧಾರಣೆ ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು’ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆ ನಿಮಿತ್ತ ಶ್ರೀಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನಾಟಕ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾಟಕಗಳು ನಗುವಿನ ಮೂಲಕ ಆರೋಗ್ಯವನ್ನು ಕಾಪಾಡುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ. ನಾಟಕಗಳಿಗೆ ಗೌರವ ಕೊಡುವ ಮೂಲಕ ಪ್ರೇಕ್ಷಕರು ಮತ್ತು ಸಂಘಟಕರು ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗುತ್ತಿದ್ದಾರೆ. ಯಕ್ಷಗಾನದಂತೆ ರಂಗಭೂಮಿಯು ಶಕ್ತಿಶಾಲಿ ಮಾಧ್ಯಮವಾಗಿದೆ. ಬದುಕಿಗೆ ಕಲಾಪ್ರೇರಣೆ ಅಗತ್ಯ’ ಎಂದು ಹೇಳಿದರು.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದುಸಾಹು ಅಂಗಡಿ ಮಾತನಾಡಿ, ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯದ ಅಭಾವವಿದ್ದರೂ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಕಲೆಗೆ ಪ್ರೋತ್ಸಾಹ ಕೊಡುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು’ ಎಂದು ಹೇಳಿದರು.

ಮುಖ್ಯಅತಿಥಿಗಳಾಗಿ ಪ್ರಮುಖರಾದ ಗಿರೆಪ್ಪಗೌಡ ಪಾಟೀಲ ಕಲ್ಲಹಂಗರಗಾ, ದೇವು ಸಾಹು ಹುಗ್ಗಿ ಹೆಗ್ಗಿನಾಳ, ಮಲ್ಲಿಕಾರ್ಜುನ ಮಹಾಜನಶೆಟ್ಟಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಸುರೇಶ ದೇಸಾಯಿ ಆಂದೋಲಾ, ಅಖಂಡು ಕಲ್ಲಾ, ರೋಮೇಶ ಮುಧೋಳ, ನಾಗಣಗೌಡ ಪಾಟೀಲ, ವಿಜಯಕುಮಾರ ಬಿರಾದಾರ, ಪ್ರಕಾಶ ಸಾಹು ಮಾಕಾ, ಶಿವಾನಂದ ಮುಧೋಳ, ಶರಣು ಮಣೂರ, ಮಹೇಶ ಮಹಾಜನಶೆಟ್ಟಿ, ಮಲ್ಲಿಕಾರ್ಜುನ ಬಿರಾದಾರ, ಗುರು ಧನ್ನೂರ, ಮಲ್ಲು ಹಡಪದ, ರೇವಣಸಿದ್ಧ ಅಕ್ಕಿ, ಭೀಮಯ್ಯ ಗುತ್ತೇದಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.