ಕಲಬುರಗಿ: ‘ಭಾರತ ಮತ್ತು ಪಾಕಿಸ್ತಾನದ ಕದನ ವಿರಾಮಕ್ಕೆ ತಮ್ಮ ಪ್ರಯತ್ನವೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ಕೊಡುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಟ್ರಂಪ್ ನೀಡಿದ್ದ ಹೇಳಿಕೆಗೆ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಇದೊಂದು ಸೂಕ್ಷ್ಮ ವಿಚಾರ. ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು. ಆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ’ ಎಂದರು.

‘ಸರ್ವ ಪಕ್ಷಗಳ ಸಭೆಯಲ್ಲಿ ಕದನ ವಿರಾಮದಲ್ಲಿ ಏನೇನು ವಿಷಯವಿದೆ? ಏನೆಲ್ಲಾ ನಡೆಯಿತು? ನಿಮ್ಮ (ಪ್ರಧಾನಿ ಮೋದಿ) ಟೆಲಿಫೋನ್ನಲ್ಲಿ ಏನೆಲ್ಲಾ ಮಾತನಾಡಿದ್ದು ಎಂದು ಕೇಳುತ್ತೇವೆ. ಈಗ ಹೇಳಿದರೆ ಸರಿ ಕಾಣುವುದಿಲ್ಲ. ಸರ್ವ ಪಕ್ಷಗಳ ಸಭೆಯಲ್ಲಿ ಕೇಳುತ್ತೇವೆ’ ಎಂದು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.