ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆಸ್ಪತ್ರೆಯಲ್ಲಿ ನೃತ್ಯ ಮಾಡಿದ ನಟ ಭುವನ್‌, ನಟಿ ಹರ್ಷಿಕಾ ಪೂಣಚ್ಚ

ರೋಗಿಗಳ ಮೊಗದಲ್ಲಿ ಮಂದಹಾಸ ಮೂಡಿಸುವ ಪ್ರಯತ್ನ 
Last Updated 31 ಮೇ 2021, 15:38 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಕೋವಿಡ್‌ 19 ಆಸ್ಪತ್ರೆಗೆ ನಟ ಭುವನ್‌ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಸೋಮವಾರ ಭೇಟಿ ನೀಡಿ, ಕೋವಿಡ್‌ ರೋಗಿಗಳ ಎದುರು ನೃತ್ಯ ಮಾಡಿದರು.

ಕಳೆದ ನಾಲ್ಕು ದಿನಗಳಿಂದ ‘ಭುವನಂ’ ಫೌಂಡೇಶನ್‌ ಅಡಿ ಕೊಡಗು ಜಿಲ್ಲೆಯಲ್ಲಿ ಆಹಾರ ಕಿಟ್‌ ಹಾಗೂ ಔಷಧಿ ವಿತರಣೆ ಮಾಡಿದ್ದ ಭುವನ್‌ ಹಾಗೂ ಹರ್ಷಿಕಾ ಅವರು ಕೋವಿಡ್‌ ಆಸ್ಪತ್ರೆಗೂ ಭೇಟಿ ನೀಡಿದ್ದರು.

ಪಿ.ಪಿ.ಇ ಕಿಟ್‌ ಧರಿಸಿದ್ದ ಇಬ್ಬರೂ ಕೋವಿಡ್‌ ರೋಗಿಗಳ ವಾರ್ಡ್‌ಗೆ ತೆರಳಿ ನೃತ್ಯ ಮಾಡಿ, ರಂಜಿಸಿದರು. ರೋಗಿಗಳ ಮೊಗದಲ್ಲಿ ಮಂದಹಾಸ ಮೂಡಿಸಲು ಪ್ರಯತ್ನಿಸಿದರು. ಇಬ್ಬರೂ ಕೊಡವ ವಾಲಗಕ್ಕೂ ಹೆಜ್ಜೆ ಹಾಕಿದರು. ಅವರೊಂದಿಗೆ ರೋಗಿಗಳೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT