ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲ: ‘ಇ-ಪ್ರಸಾದ’ ವ್ಯವಸ್ಥೆಗೆ ಚಾಲನೆ

Last Updated 7 ಮಾರ್ಚ್ 2023, 6:33 IST
ಅಕ್ಷರ ಗಾತ್ರ

ಮಡಿಕೇರಿ: ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಇ-ಪ್ರಸಾದ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೋಮವಾರ ಚಾಲನೆ ನೀಡಿದರು.

‘ಕಾವೇರಿ ಭಕ್ತರು ಮನೆಯಲ್ಲೇ ಕುಳಿತು www.indiapost.gov.in ಜಾಲತಾಣಕ್ಕೆ ಭೇಟಿ ನೀಡಿ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದು. ದೇವಾಲಯ ಅಡಳಿತ ಮಂಡಳಿಯಿಂದ ₹ 300 ದರ ನಿಗದಿಪಡಿಸಲಾಗಿದೆ. 100 ಎಂ.ಎಲ್. ಕಾವೇರಿ ತೀರ್ಥ, 100 ಗ್ರಾಂ. ಪಂಚಕಜ್ಜಾಯ, ತಲಕಾವೇರಿ ಕ್ಷೇತ್ರದ ಕುಂಕುಮ, ಭಗಂಡೇಶ್ವರ ದೇವಾಲಯದಿಂದ ಗಂಧ ಪ್ರಸಾದವನ್ನು ನೀಡಲಾಗುತ್ತದೆ’ ಎಂದರು.

‘ದೇಶದ ಯಾವುದೇ ಭಾಗದಿಂದ ಅಂಚೆ ಕಚೇರಿಯಲ್ಲಿ ಇ–ಪೇಮೆಂಟ್ ಮೂಲಕ ಬುಕ್ ಮಾಡಬಹುದು. ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ತಲುಪಿಸಲಾಗುತ್ತದೆ. ಮಾಹಿತಿಗೆ ಸಹಾಯವಾಣಿ: 18002666868 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT