ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಮಡಿಕೇರಿ: ಚುಟುಕುಗಳ ಮಳೆಯಲ್ಲಿ ತಣಿದ ಪ್ರೇಕ್ಷಕರು

ಮಡಿಕೇರಿಯಲ್ಲೊಂದು ಅಪರೂಪದ ಕಾರ್ಯಕ್ರಮ, ಚುಟುಕು ವಾಚನ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ
Published : 7 ಜುಲೈ 2025, 3:03 IST
Last Updated : 7 ಜುಲೈ 2025, 3:03 IST
ಫಾಲೋ ಮಾಡಿ
Comments
ಎಲ್ಲರನ್ನು ಬೆಸೆಯುವ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ. ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿರುವುದು ಶ್ಲಾಘನೀಯ
ಸುಬ್ರಾಯ ಸಂಪಾಜೆ ಸಾಹಿತಿ
ಡಾ.ವಾಮನ್ ರಾವ್ ಬೇಕಲ್ ಅವರು ನೀಡುತ್ತಿರುವ ಕೊಡುಗೆ ಅಪಾರ. ಇವರ ಪ್ರಯತ್ನಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು
ಬೊಳ್ಳಜಿರ ಬಿ.ಅಯ್ಯಪ್ಪ ಕೊಡಗು ಕನ್ನಡ ಭವನದ ಅಧ್ಯಕ್ಷ
ಇನ್ನು ಮುಂದೆಯೂ ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿ ಯುವ ಸಮೂಹದಲ್ಲಿ ಕನ್ನಡ ಭಾಷಾಭಿಮಾನವನ್ನು ಮೂಡಿಸಲಾಗುವುದು
ಎಂ.ಎ.ರುಬೀನಾ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ
‘ಗಡಿಭಾಗದಲ್ಲಿ ಕನ್ನಡ ಉಳಿಸುವ ಅನಿವಾರ್ಯತೆ’
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಮಾತನಾಡಿ ‘ಗಡಿನಾಡುಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ’ ಎಂದು ಅಭಿಪ್ರಾಯಪಟ್ಟರು. ಕಾಸರಗೋಡು ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಕನ್ನಡದ ಮನಸ್ಸುಗಳು ಕನ್ನಡ ಭಾಷೆ ಮತ್ತು ನಾಡಿಗಾಗಿ ಮಿಡಿಯುತ್ತಿವೆ. ಯುವ ಜನರಲ್ಲಿ ಕನ್ನಡಾಭಿಮಾನ ಜೀವಂತವಾಗಿರಬೇಕೆನ್ನುವ ಪ್ರಯತ್ನವಾಗಿ ಚುಟುಕು ಸಾಹಿತ್ಯ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಕನ್ನಡದ ನಡಿಗೆ ಶಾಲೆ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಲಾಗುತ್ತಿದೆ. 20 ಶಾಲೆಗಳನ್ನು ಸಂಪರ್ಕಿಸಿದ್ದು ಸಾಹಿತ್ಯ ರಚನಾ ಶಿಬಿರಗಳನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಮನೆ ಮನೆಯಲ್ಲಿ ಕನ್ನಡ’ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.
‘ಶೈಲಿ ಹೊಸತಾಗಿರಲಿ ಭಾಷೆ ಬಳಕೆಯಲ್ಲಿ ಎಚ್ಚರವಿರಲಿ’
‘ಭಾವನೆಗಳಿಂದ ಹುಟ್ಟಿದ ಕಾವ್ಯ ಆಯಾ ಕಾಲದ ಕೂಸಾಗಿರುತ್ತದೆ ಮಾತ್ರವಲ್ಲ ಅದಕ್ಕೂ ಒಂದು ಜೀವವಿರುತ್ತದೆ. ಭಾಷೆಯನ್ನು ಬಳಸುವ ಶೈಲಿ ಹೊಸ ಬಗೆಯದ್ದಾಗಿರಬೇಕು. ಪರಿಣಾಮಕಾರಿಯಾಗಿರಬೇಕು ಮತ್ತು ಭಾಷೆ ಬಳಕೆಯಲ್ಲಿ ಎಚ್ಚರವಿರಬೇಕು’ ಎಂದು ಲೇಖಕಿ ಸ್ಮಿತಾ ಅಮೃತರಾಜ್ ಕಿವಿಮಾತು ಹೇಳಿದರು. ‘ಸಮಾಜದಲ್ಲಿನ ನ್ಯೂನತೆಗಳನ್ನು ಪ್ರತಿಬಿಂಬಿಸುವ ದೊಡ್ಡ ಶಕ್ತಿ ಚುಟುಕು ಸಾಹಿತ್ಯಕ್ಕಿದೆ. ಸಣ್ಣ ಸಣ್ಣ ಬರಹಗಳು ಬರಹಗಾರರಿಗೆ ಅಡಿಪಾಯವನ್ನು ಹಾಕಿ ಕೊಡುತ್ತವೆ. ನಮ್ಮನ್ನು ಒತ್ತಡದಿಂದ ಬಿಡುಗಡೆಗೊಳಿಸಲು ಮತ್ತು ಮನಸ್ಸನ್ನು ಹಗುರವಾಗಿಸಲು ಕಾವ್ಯ ಉತ್ತಮ ಅಸ್ತ್ರವಾಗಿದೆ. ಕಾವ್ಯಗಳನ್ನು ಓದುವ ಸಹೃದಯರೂ ಇರಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT